ಕುಂಬ್ಡಾಜೆ : ಪ್ರಗತಿಪರ ಕೃಷಿಕ ನಡುಮನೆ ರವೀಂದ್ರನಾಥ್ ಭಟ್ (65) ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ರವೀಂದ್ರ ನಾಥ್ ಅವರು ಮಾರ್ಪನಡ್ಕದ ಬ್ಯಾಂಕಿಗೆ ಬಂದಿದ್ದಾಗ ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ.
ನಡುಮನೆ ಪುರುಷೋತ್ತಮ ಭಟ್ - ದುರ್ಗಮ್ಮ ದಂಪತಿಗಳ ಪುತ್ರರಾಗಿದ್ದ ಇವರು ಪತ್ನಿ ಲಲಿತಾ, ಮಕ್ಕಳಾದ ಸುಷ್ಮಾ, ನಿಷ್ಮಾ , ಅಳಿಯಂದಿರಾದ ವಿವೇಕ್, ವಿಕಾಸ್ ಹಾಗೂ ಇಬ್ಬರು ಸಹೋದರರು, ಏಳು ಜನ ಸಹೋದರಿಯರನ್ನಗಲಿದ್ದಾರೆ. ಇವರ ಓರ್ವೆ ಸಹೋದರಿ ಈ ಹಿಂದೆಯೇ ತೀರಿಕೊಂಡಿದ್ದಾರೆ.

0 Comments