Ticker

6/recent/ticker-posts

ಸ್ನಾನ ಮಾಡುತ್ತಿರುವ ವೇಳೆ ವಿದ್ಯುತ್ ಶಾಕ್ ತಗುಲಿ 10 ನೇ ತರಗತಿ ವಿದ್ಯಾರ್ಥಿ ಮೃತ್ಯು


 ಬಾತ್ ರೂಂನಲ್ಲಿ ವಿದ್ಯುತ್ ಶಾಕ್ ತಗುಲಿ 10 ನೇ ತರಗತಿ ವಿದ್ಯಾರ್ಥಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಪಾಲಕ್ಕಾಡ್ ಪಟ್ಡಾಂಬಿ  ಕಾಲೇಜಿ ಸ್ಟ್ರೀಟ್ ನಿವಾಸಿ‌ ಮುಹಮ್ಮದ್ ರಿಯಾಸುದ್ದೀನ್- ಶಾಹಿದ ದಂಪತಿಯ ಪುತ್ರ ಜಾಸಿಂ ರಿಯಾಸ್ (15) ಮೃತಪಟ್ಟ ಬಾಲಕ, ಈತ ಕೊಂಡೋರ್ಕರ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.

  ಆದಿತ್ಯವಾರ ಮದ್ಯಾಹ್ನ ಈತ ಸ್ನಾನ ಮಾಡುತ್ತಿರುವ ಮಧ್ಯೆ  ವಿದ್ಯುತ್ ಶಾಕ್ ತಗುಲಿತ್ತು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ  ಮೃತಪಟ್ಟಿದ್ದನು ಎಂದು ತಿಳಿದು ಬಂದಿದೆ

Post a Comment

0 Comments