Ticker

6/recent/ticker-posts

ಕೋಳಿ ಅಂಕದ ಕೇಂದ್ರಕ್ಕೆ ಪೊಲೀಸರ ದಾಳಿ, ಮೂರು ಮಂದಿಯ ಸೆರೆ, ಎರಡು ಕೋಳಿ ವಶ


 ಬದಿಯಡ್ಕ: ಕೋಳಿ ಅಂಕದಲ್ಲಿ ‌ನಿರತರಾಗಿದ್ದ ಮೂರು ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬೆಳಿಂಜ ಬಳಿಯ ಕಿಶೋರ್(35), ಪ್ರಶಾಂತ್(40) ,  ರಘುನಾಥ (40) ಬಂಧಿತರು.ಆದಿತ್ಯವಾರ ಸಂಜೆ  4 ಗಂಟೆಯ ವೇಳೆ ಬೆಳಿಂಜದಲ್ಲಿರುವ ಪ್ರಯಾಣಿಕರ ತಂಗುದಾಣದ ಹಿಂಬಾಗದಿಂದ ಇವರನ್ನು ಬಂಧಿಸಲಾಗಿದೆ. ಬೆಳಿಂಜದಲ್ಲಿ ಕೋಳಿ ಅಂಕ ನಡೆಯುತ್ತಿದೆಯೆಂಬ  ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು. ಎರಡು ಕೋಳಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ

Post a Comment

0 Comments