Ticker

6/recent/ticker-posts

ಕೆಲಸದ‌ ಮಧ್ಯೆ ಉದ್ಯೋಗ ಖಾತರಿ ಕಾರ್ಮಿಕರಿಗೆ ಪೊದೆಗಳೆಡೆಯಲ್ಲಿ ಪತ್ತೆಯಾದದ್ದು 23 ಮದ್ಯ ಬಾಟಲಿಗಳು, ಪೊಲೀಸರ ಹಾಗೂ ಊರವರ ಉಪಸ್ಥಿತಿಯಲ್ಲಿ ಮದ್ಯವನ್ನು ಚೆಲ್ಲಿದ ಕಾರ್ಮಿಕರು


 ಕಾಸರಗೋಡು:  ಉದ್ಯೋಗ ಖಾತರಿ ಕಾರ್ಮಿಕರು ಹಿತ್ತಲಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪೊದೆಗಳೆಡೆಯಲ್ಲಿ 23 ಮದ್ಯ ಬಾಟಲಿಗಳು ಪತ್ರೆಯಾಗಿದೆ. ಪಡನ್ನ ಪಂಚಾಯತಿನ ಕಂದಿಲೋಟ್ ಪರಿಸರದಲ್ಲಿ ಬುದವಾರ ಮದ್ಯ ಬಾಟಲಿಗಳು ಪತ್ತೆಯಾಗಿದೆ. ಉದ್ಯೋಗ ಖಾತರಿ ಕಾರ್ಮಿಕರು ಜನವಾಸವಿಲ್ಲದ ಮನೆಯ ಹಿತ್ತಲಿನಲ್ಲಿ ಕೆಲಸ ಮಾಡುವ ವೇಳೆ ಇವು ಪತ್ತೆಯಾಗಿವೆ. ಅರ್ದ ಮದ್ಯ ಇರುವ 18, ಮುಚ್ಚಳ ತೆರೆಯದಿರುವ 4,  ಎರಡು ಲೀಟರಿನ ಬಾಟಲಿ ಎಂಬಿವು ಪತ್ತೆಯಾಗಿದೆ. ಮಾಹಿತಿ ತಿಳಿದು ಆಗಮಿಸಿದ ಪೊಲೀಸರ ಹಾಗೂ ಊರವರ ಉಪಸ್ಥಿತಿಯಲ್ಲಿ ಉದ್ಯೋಗ ಖಾತರಿ ಕಾರ್ಮಿಕರು ಮದ್ಯವನ್ನು ಮುಚ್ಚಳ ತೆಗೆದು ಚೆಲ್ಲಿದರು.  

ಮದ್ಯ ತಂದಿಟ್ಟವರು ಅಲ್ಲೇ ಇದ್ದರೂ ಪೊಲೀಸರ ಹಾಗೂ ಕಾರ್ಮಿಕರ ಮುಂದೆ ಬಾಯ್ತೆರೆಯುವ ಸಾಹಸಕ್ಕೆ ಮುಂದಾಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ

Post a Comment

0 Comments