Ticker

6/recent/ticker-posts

ಉಪ್ಪಳ ಅಂಚೆ ಕಚೇರಿ ಮುಂಭಾಗ ಸಿಐಟಿಯು ಆಶಾ ಯೂನಿಯನ್ ನಿಂದ ಪ್ರತಿಭಟನೆ

 


ಉಪ್ಪಳ : ಕೇಂದ್ರ ಸರ್ಕಾರ 2005 ರಲ್ಲಿ ಆಶಾ ಯೋಜನೆಯನ್ನು ಜಾರಿಗೆ ತಂದು ಅದರ ಮೂಲಕ ಸಾಮಾಜಿಕ ಕಾರ್ಯಕರ್ತರಾಗಿ ನೇಮಕ ವಾದ ಇವರನ್ನು ಕೇಂದ್ರ ಸರ್ಕಾರ ಸ್ಥಿರ ಕಾರ್ಮಿಕರಾಗಿ ನೇಮಿಸ ಬೇಕು, ಕನಿಷ್ಠ ವೇತನ 26000 ರೂಪಾಯಿ ಕೊಡಬೇಕು ,ಪಿ ಎಫ್ ಪೆನ್ಸನ್ ಗ್ರಾಟಿವಿಟಿ ನೀಡಬೇಕು, ಇನ್ಸುರೆನ್ಸ್ ಪುನಃ ಸ್ಥಾಪಿಸಬೇಕು, ಕೇಂದ್ರ ಬಜೆಟ್ ನಲ್ಲಿ ರಾಜ್ಯ ಸರ್ಕಾರಕ್ಕೆ ನೀಡುವ ಅರ್ಹವಾದ ಪಾಲು ನೀಡಬೇಕು ಎಂಬ ಘೋಷಣೆಯನ್ನು ಮುಂದಿಟ್ಟು  ಉಪ್ಪಳ ಪೋಸ್ಟ್ ಆಫೀಸ್ ಮುಂಭಾಗದಲ್ಲಿ ನಡೆದ ಆಶಾ ಕಾರ್ಯಕರ್ತೆಯರ ಪ್ರತಿಭಟನಾ ಸಭೆಯನ್ನು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಗಿರಿ ಕೃಷ್ಣನ್ ಉದ್ಘಾಟಿಸಿ ಮಾತನಾಡಿದರು.   ಅವರು ದೇಶವ್ಯಾಪಕವಾಗಿ ಆಶಾ ಕಾರ್ಯಕರ್ತೆಯರನ್ನು ಅವಗಣಿಸುವ ಕೇಂದ್ರ ಸರ್ಕಾರ  ಇನ್ಸೆಂಟಿವ್ ಮುಖಾಂತರ ಕೇವಲ 60 % ಮಾತ್ರ ಕೊಡುತ್ತಿದ್ದು ಬಾಕಿ ಮೊತ್ತ 40% ರಾಜ್ಯ ಸರ್ಕಾರ ಗಳು ಕೊಡುತ್ತಿದ್ದು ಕೇಂದ್ರದ ಯೋಜನೆ ಯಾದರೂ ಅವರಿಗೆ 3000 ಮಾತ್ರ ಇನ್ಸೆಂಟಿವ್ ಕೊಡುತ್ತದೆ. ಅದರಲ್ಲೂ 1800 ಮಾತ್ರ ಪ್ರತಿ ಆಶಾ ಕಾರ್ಯಕರ್ತೆಯರಿಗೆ ನೀಡುತ್ತದೆ  ಈ ಹಣವನ್ನು ರಾಜ್ಯ ಸರ್ಕಾರಕ್ಕೆ ಕೊಡದೆ ಸತಾಯಿಸುತ್ತಿದ್ದು ಅವರಿಗೆ ಹೆರಿಗೆ ಭತ್ಯೆ ಹಾಗೂ ಇತರ ಸರ್ವೆ ಮುಖಾಂತರ ಕೇರಳ ಸರ್ಕಾರ ಗೌರವಧನ ಕೊಟ್ಟು ಕೇರಳ ಸರಕಾರ ದೇಶದಲ್ಲಿ ಅತೀ ಹೆಚ್ಚು ವೇತನವಾದ 7000 ಗೌರವ ಧನ ಹಾಗೂ ಇತರ ಸೌಲಭ್ಯ ಕೊಟ್ಟು ಅವರಿಗೆ ಅವರ ಚಟುವಟಿಕೆ ಆಧಾರದಲ್ಲಿ 13 ,200  ಕೊಟ್ಟು ಅವರಿಗೆ ಅಲ್ಪಮಟ್ಟದ ಪ್ರಯೋಜನ ಲಭಿಸುವಂತೆ ಮಾಡುತ್ತಿದೆ.  ಆಶಾ ಕಾರ್ಯಕರ್ತೆಯರನ್ನು ಸ್ಥಿರ ಉದ್ಯೋಗಿಯಾಗಿ ಘೋಷಿಸದ ಕೇಂದ್ರ ಸರ್ಕಾರದ ನೀತಿ ಖಂಡನೀಯವಾಗಿದೆ.  ಈ ರೀತಿ ಕೇಂದ್ರವನ್ನು ಅಳುವ ಜನ ವಿರೋಧಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಶೋಷಣೆ ಮಾಡುತ್ತಿದ್ದು ಈಗ ಕೇರಳದಲ್ಲಿ ಜನರ ದಾರಿ ತಪ್ಪಿಸುವ ರೀತಿಯಲ್ಲಿ ಪ್ರತಿಭಟನೆ ನಡೆಸುವ  suci ಸಂಘಟನೆ ಕೇಂದ್ರ ಸರ್ಕಾರದ ವಂಚನೆ ಯನ್ನು ಮುಚ್ಚಿ ರಾಜಕೀಯ ಹೋರಾಟದಲ್ಲಿ ಬಿಜೆಪಿ ಕಾಂಗ್ರೆಸ್ ಕಪಟ ಮುಖ ವನ್ನು ತೋರಿಸುವಂತೆ ಕಾಣುತ್ತಿದ್ದು ಬಿಜೆಪಿ ನಾಯಕರು ಆಶಾ ಕಾರ್ಯಕರ್ತೆಯರ ಮೇಲೆ ತೋರಿಸುವ ಮೊಸಳೆ ಕಣ್ಣೀರು ಕೊನೆಗೊಳಿಸಿ ಕೇಂದ್ರದ ಯೋಜನೆ ಯಾದ ಆಶಾ ಕಾರ್ಯಕರ್ತೆ ಯರ ನ್ಯಾಯವಾದ ಬೇಡಿಕೆಗೆ ಸ್ಪಂದಿಸಿ ನ್ಯಾಯ ಒದಗಿಸಲು ಮುಂದಾಗಬೇಕು ಎಂದು ಅವರು ಹೇಳಿದರು. ಸಿಐಟಿಯು ಆಶಾ ಯೂನಿಯನ್ ಮಂಜೇಶ್ವರ ಏರಿಯಾ ಅಧ್ಯಕ್ಷೆ ಜಲಜಾ .ಸಿ ಅಧ್ಯಕ್ಷತೆವಹಿಸಿದ್ದರು. ಸಿಐಟಿಯು ಮಂಜೇಶ್ವರ ಏರಿಯಾ ಕಾರ್ಯದರ್ಶಿ ಪ್ರಶಾಂತ್ ಕನಿಲ ,ಡಿ ಕಮಲಾಕ್ಷ ,ಸತೀಶ್ ಎಲಿಯಾನ, ಹುಸೇನ್ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು. ಕೆ ಎನ್ ಶುಭಾ ಸ್ವಾಗತಿಸಿದರು.

Post a Comment

0 Comments