Ticker

6/recent/ticker-posts

ಬೈಕಿನ ಮೇಲೆ ಮಾವಿನ ಮರದ ಕೊಂಬೆ ಬಿದ್ದು ಬ್ಯಾಂಕ್ ನೌಕರ ಮೃತ್ಯು


 ಬೈಕಿನ  ಮೇಲೆ ಮಾವಿನ ಮರದ ಕೊಂಬೆ ಬಿದ್ದು ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ಬೆಳ್ತಂಗಡಿ. ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ಮಸೀದಿ ಸಮೀಪದ ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಜಾರಿಗೆಬೈಲು ಎಂಬಲ್ಲಿ  ನಡೆದಿದೆ.ಗುರುವಾರ ರಾತ್ರಿ 8 ಗಂಟೆಗೆ ಈ ಘಟನೆ ನಡೆದಿದೆ.

ಬೆಳಾಲು ಪೆರಿಯಡ್ಕ ಸಮೀಪದ ಕರ್ಪುದ ಗುಡ್ಡೆ ನಿವಾಸಿ ಸಂಜೀವ ಅವರ ಪುತ್ರ  ಪ್ರವೀಣ ಎಸ್. ಎಲ್. (25) ಮೃತಪಟ್ಟ ದುರ್ದೈವಿ. ಅವರು ಮಂಗಳೂರಿನ ಐ.ಡಿ.ಎಫ್.ಸಿ. ಬ್ಯಾಂಕ್‌ ಉದ್ಯೋಗಿಯಾಗಿದ್ದರು.

ಮಾವಿನ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ  ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು. ಮೃತದೇಹವನ್ನ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಪೊಲೀಸ್‌ ಠಾಣೆ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Post a Comment

0 Comments