ಮೈಸೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಹಣ ಅಪಹರಿಸಿದ ಆರೋಪಿ ಪೊಲೀಸನ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ್ದು ಪೊಲೀಸರು ಕಾಲಿಗೆ ಗುಂಡು ಹೊಡೆದು ಆರೋಪಿಯನ್ನು ಬೀಳಿಸಿದ ಪ್ರಕರಣ ನಡೆದಿದೆ. ಆಲಪ್ಪುಯ ನಿವಾಸಿ ಆದರ್ಶ್(26) ಆರೋಪಿಯಾಗಿದ್ದು ಈತನನ್ನು ಇದೀಗ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಜನವರಿ 20 ರಂದು ಕೋಜಿಕ್ಕೋಡ್ ಕೊಡುವಳ್ಳಿ ನಿವಾಸಿ ಮುಹಮ್ಮದ್ ಅಶ್ರಫ್, ಸೂಫಿ ಎಂಬಿವರು ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ 1.5 ಲಕ್ಷ ರೂ ದರೋಡೆಗೈದ ಪ್ರಕರಣದಲ್ಲಿ ಆದರ್ಶ್ ನನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ವಿಜೇಶ್ ಎಂಬಿವರನ್ನು ಸಹ ಬಂಧಿಸಲಾಗಿತ್ತು. ಆರೋಪಿಗಳು ಕಾರಿನಲ್ಲಿದ್ದವರನ್ನು ಹೊರಗೆ ಹಾಕಿ ಕಾರನ್ನು ಅಪಹರಿಸಿ ಸ್ವಲ್ಪ ದೂರದಲ್ಲಿ ತೊರೆದು ಪರಾರಿಯಾಗಿದ್ದರು.
ಕಾರು ಉಪೇಕ್ಷಿಸಿದ ಸ್ಥಳವನ್ನು ತೋರಿಸಲು ಬಂಧಿತ ಆರೋಪಿಯನ್ನು ಕರೆತರಲಾಗಿದ್ದು ಈ ವೇಳೆ ಆರೋಪಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಬಿಯರ್ ಬಾಟಲಿ ತೆಗೆದು ಪೊಲೀಸರ ಮೇಲೆ ಹಲ್ಲೆಗೈದನೆನ್ನಲಾಗಿದೆ. ಕೂಡಲೇ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹೊಡೆದು ಬೀಳಿಸಿದ್ದಾರೆ.
0 Comments