Ticker

6/recent/ticker-posts

ಮೊಗ್ರಾಲಿನಲ್ಲಿ ನಿಲ್ಲಿಸಿದ್ದ ಕ್ರೇನ್ ಗೆ ಪಿಕಪ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಯುವಕ ಮಂಗಳೂರು ಆಸ್ಪತ್ರೆಯಲ್ಲಿ ಮೃತ್ಯು


 ಕಾಸರಗೋಡುರಾಷ್ಟ್ರೀಯ ಹೆದ್ದಾರಿ‌ ಮೊಗ್ರಾಲಿನಲ್ಲಿ  ನಿಲ್ಲಿಸಿದ್ದ ಕ್ರೇನ್ ಗೆ ಪಿಕಪ್ ವ್ಯಾನು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಯುವಕ ಮೃತಪಟ್ಟ ಘಟನೆ ನಡೆದಿದೆ. ಕಾಸರಗೋಡು ಬೆದಿರ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ನಿಯಾಸ್(42) ಮೃತಪಟ್ಟ ಯುವಕ. ಮಂಗಳೂರು ಆಸ್ಪತ್ರೆಯಲ್ಲಿ ಇವರು  ಇಂದು (ಶನಿವಾರ) ಸಂಜೆ ಕೊನೆಯುಸಿರೆಳೆದರು.
 ಶುಕ್ರವಾರ ‌ಮದ್ಯಾಹ್ನ ಮೊಗ್ರಾಲಿನಲ್ಲಿ ಈ ಅಫಘಾತ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು  ಅದಕ್ಕಾಗಿ ಕ್ರೇನ್  ನಿಲ್ಲಿಸಲಾಗಿತ್ತು. ಈ ವೇಳೆ ನಿಯಾಸ್ ಚಲಾಯಿಸುತ್ತಿದ್ದ ಪಿಕಪ್ ವ್ಯಾನ್ ಕ್ರೇನ್ ಗೆ ಡಿಕ್ಕಿ ಹೊಡೆದಿದೆ. ಅಫಘಾತದಿಂದಾಗಿ ನಿಯಾಸ್ ನ ಎರಡೂ ಕಾಲುಗಳು ಸಿಲುಕಿಕೊಂಡಿದ್ದು ಮಾಹಿತಿ ತಿಳಿದು ಆಗಮಿಸಿದ ಅಗ್ನಿಶಾಮಕ ದಳ ಸಿಬಂದಿಗಳು ಅವರನ್ನು ಹೊರತೆಗೆದರು. ಗಂಭೀರ ಗಾಯಗೊಂಡ ‌ನಿಯಾಸ್ ರನ್ನು ‌ಕೂಡಲೇ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ‌ಫಲಕಾರಿಯಾಗದ ಹಿನ್ನೆಲೆಯಲ್ಲಿ ಅವರು ಇಂದು ಕೊನೆಯುಸಿರೆಳೆದರು

Post a Comment

0 Comments