ಕಾಸರಗೋಡು: ಸಿಪಿಐ ಮುಖಂಡನ ಹತ್ಯೆಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಆರೋಪಿಗಳಿಗೆ 9 ವರ್ಷ ಕಠಿಣ ಸಜೆ ಹಾಗೂ 60 ಸಾವಿರ ರೂ.ನಂತೆ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಬದಿಯಡ್ಕ ಬಳಿಯ ಬಾಂಜತ್ತಡ್ಕ ನಿವಾಸಿ ಸೀತಾರಾಮ ಎಂಬವರನ್ನು ತಡೆದು ನಿಲ್ಲಿಸಿ ಕಲ್ಲು, ಕತ್ತಿ, ತಲವಾರು ಎಂಬುವುಗಳಿಂದ ಹೊಟ್ಟೆ, ಎದೆಗೆ ಇರಿದು ಗಂಭೀರ ಗಾಯಗೊಳಿಸಿದ ಪ್ರಕರಣದಲ್ಲಿ ಬಾಂಜತ್ತಡ್ಕ ನಿವಾಸಿ ರವಿತೇಜ್, ಕೈಲಂಕಜೆ ನಿವಾಸಿ ಪ್ರದೀಪ್ ರಾಜ್ ಎಂಬಿವರಿಗೆ ಕಾಸರಗೋಡು ನ್ಯಾಯಾಲಯ ಶಿಕ್ಷೆ ವಿಧಿಸಿದೆ. ದಂಡ ಪಾವತಿಸದೇ ಇದ್ದಲ್ಲಿ 6 ತಿಂಗಳು ಹೆಚ್ಚು ಸಜೆ ಅನುಭವಿಸಬೇಕು.
2016 ಸೆಪ್ಟೆಂಬರ್ 5 ರಂದು ರಾತ್ರ 7.30 ಕ್ಕೆ ಈ ಘಟನೆ ನಡೆದಿತ್ತು. ಅಂದು ವಿದ್ಯಾನಗರ ಇನ್ಸ್ಪೆಕ್ಟರ್ ಆಗಿದ್ದ ಬಾಬು ಪೆರಿಂಗೋತ್ ಪ್ರಕರಣ ದಾಖಲಿಸಿದ್ದರು. ಪ್ರಾಸಿಕ್ಯೂಸನ್ ಗಾಗಿ ಗವರ್ನಮೆಂಟ್ ಪ್ಲೀಡರ್ ಚಂದ್ರಮೋಹನ್ ಜಿ,ನ್ಯಾಯವಾದಿ ಚಿತ್ರಕಲಾ ಎಂಬಿವರು ವಾದಿಸಿದ್ದಾರೆ
0 Comments