Ticker

6/recent/ticker-posts

ದುಬೈಯಲ್ಲಿ ಉಂಟಾದ ವಾಹನ ಅಫಘಾತದಲ್ಲಿ ಮೃತಪಟ್ಟ ಪಾಡಿ ನಿವಾಸಿಯ ಮೃತದೇಹ ಊರಿಗೆ ತಂದು ಅಂತ್ಯಸಂಸ್ಕಾರ


 ಚೆರ್ಕಳ:  ದುಬೈನಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟ ಚೆರ್ಕಳ ಪಾಡಿ   ಕಾನಂ‌ ನಿವಾಸಿ ಶ್ರೀ ರಾಜ್ (30) ರ ಮೃತದೇಹವನ್ನು ಊರಿಗೆ ತರಲಾಯಿತು. ಕಳೆದ ಆದಿತ್ಯವಾರದಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಫಘಾತ ಉಂಟಾಗಿತ್ತು. ನಿಯಂತ್ರಣ ತಪ್ಪಿದ ಕಾರು ಡಿವೈಡರಿಗೆ ಡಿಕ್ಕಿ ಹೊಡೆದು ಉಂಟಾದ ಅಫಘಾತದಲ್ಲಿ ಶ್ರೀರಾಜ್ ಹಾಗೂ ಪತ್ತನಂತಿಟ್ಟ ನಿವಾಸಿ ಮೃತಪಟ್ಟಿದ್ದರು. ದುಬೈಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದ ಮೃತದೇಹವನ್ನು ಇಂದು (ಶನಿವಾರ) ಬೆಳಗ್ಗೆ ಪಾಡಿ  ಮನೆಗೆ ತಲುಪಿಸಲಾಯಿತು. ದುಬೈಯಲ್ಲಿ ಎ.ಸಿ.ಮೆಕಾನಿಕಲ್ ಕೆಲಸ ಮಾಡುತ್ತಿದ್ದ ಶ್ರೀರಾಜ್ ಕಳೆದ ಜನವರಿಯಲ್ಲಿ ಊರಿಗೆ ಬಂದು ಹಿಂತಿರುಗಿದ್ದರು. ದಿವಂಗತ ವಳ್ಳಿಯೋಡನ್ ಕುಞಂಬು ನಾಯರ್ ಅವರ ಪುತ್ರರಾದ ಶ್ರೀರಾಜ್, ತಾಯಿ ಸಾವಿತ್ರಿ, ಸಹೋದರ ಶ್ರಿಜೇಶ್ ಎಂಬಿವರನ್ನು ಅಗಲಿದ್ದಾರೆ

Post a Comment

0 Comments