ಪೆರ್ಲ: ನಾಲಂದ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಭೂ ಮಿತ್ರ ಸೇನೆ ಸಹಯೋಗದಲ್ಲಿ ವಿಶ್ವ ಜಲ ದಿನ ಆಚರಿಸಲಾಯಿತು. ಇದರ ಅಂಗವಾಗಿ ಶಂಕರ ವಾಣಿನಗರ ಎಂಬವರ ಮನೆಗೆ ಭೇಟಿ ನೀಡಿ ಮಡಕೆ ಮಾಡುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಯಿತು. ಈಗಿನ ಜನಾಂಗಕ್ಕೆ ಮಡಕೆಯ ಉಪಯೋಗದ ಬಗ್ಗೆ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಭೂಮಿತ್ರ ಸೇನೆಯ ಸಂಯೋಜಕಿ ಅನುಪಮಾ ಇವರು ಕಾರ್ಯಕ್ರಮ ಸಂಯೋಜಿಸಿದರು.
0 Comments