Ticker

6/recent/ticker-posts

ಬಂಗಾಳಿ ಕಾರ್ಮಿಕರೊಳಗೆ ಘರ್ಷಣೆ, ಇರಿತದಿಂದ ಓರ್ವ‌ಸಾವು

.    ಮೃತ ಇಸ್ಮಾಯಿಲ್ (ಕೆಂಪು ಟಿ ಶರ್ಟ್ ಧರಿಸಿದವರು) ಹಾಗೂ ಆರೋಪಿ


 ಕಣ್ಣೂರಿನ ಆಂತೂರು ನಗರಸಭಾ ವ್ಯಾಪ್ತಿಯ ಮೋರಾಯ ಕುಳಿಚಾಲ್ ಎಂಬಲ್ಲಿ ಬಂಗಾಳಿ ಯುವಕನನ್ನು ಇರಿದು ಕೊಲೆಗೈದ ಘಟನೆ ನಡೆದಿದೆ. ಮೊರಾಯ ಕುಳಿಚಾಲ್ ನಲ್ಲಿ ವಾಸಿಸುವ ಬಂಗಾಳ ನಿವಾಸಿ ದಲಿಂಲಕಾನ್ ಯಾನೆ ಇಸ್ಮಾಯಿಲ್(36) ಕೊಲೆಗೀಡಾದ ವ್ಯಕ್ತಿ. ಈತನ‌ ಜತೆಗೆ  ವಾಸಿಸುತ್ತಿರುವ ಬಂಗಾಳಿ ಯುವಕ ಸುಜೋಯ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ (ಆದಿತ್ಯವಾರ) ರಾತ್ರಿ 8 ಗಂಟೆಯ ವೇಳೆ ಈ ಘಟನೆ ನಡೆದಿದೆ.

   ಅನ್ಯ ರಾಜ್ಯ ಕಾರ್ಮಿಕರು ವಾಸಿಸುವ ಕಡ್ಟಡದ ಮೇಲ್ಭಾಗದಲ್ಲಿ ಇಸ್ಮಾಯಿಲ್ ನ ಕೊಲೆ   ನಡೆದಿದೆ. ಇಸ್ಮಾಯಿಲ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಸಹೋದರ ಹುಡುಕುವ ವೇಳೆ ಕಟ್ಟಡದ ಮೇಲ್ಭಾಗದಲ್ಲಿ  ಇಸ್ಮಾಯಿಲ್  ರಕ್ತದ ಮಡುವಿನಲ್ಲಿ ಬಿದ್ದರುವುದು ಕಂಡು ಬಂದಿದ್ದು ಆಸ್ಪತ್ರೆಗೆ ಸಾಗಿಸಲು ಸಿದ್ದತೆ ನಡೆಸುತ್ತಿದ್ದಂತೆ ಮೃತಪಟ್ಟಿದ್ದಾನೆ. ಈ ವೇಳೆ ಆರೋಪಿ ಸಂಜಯ್‌ ಕುಮಾರ್ ಆಟೋ ರಿಕ್ಷಾದಲ್ಲಿ ಪರಾರಿಯಾಗಲು ಯತ್ನಿಸಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಇಸ್ಮಾಯಿಲ್ ಕಳೆದ 15 ವರ್ಷಗಳಿಂದ ಕಣ್ಣೂರಿನಲ್ಲಿ ಕಟ್ಟಡ ನಿರ್ಮಾಣ ಮೇಸ್ತ್ರಿ ಕೆಲಸ ಮಾಡುತ್ತಿದ್ದಾನೆ

Post a Comment

0 Comments