ಬಾಯಾರು : ಶ್ರೀ ಮಲರಾಯ ಧೂಮಾವತೀ ಪಂಜುರ್ಲಿ ನಾಗ ಪರಿವಾರ ದೈವಸ್ಥಾನ ಬಂಗೇರ ತರವಾಡು ಕಣಿಹಿತ್ತಿಲು ಇಲ್ಲಿ ವರ್ಷಂಪ್ರತಿಯಂತೆ ಜಾತ್ರೋತ್ಸವಕ್ಕೆ ಮೊದಲು ಶ್ರೀ ವೆಂಕಟರಮಣ ದೇವರ ಮುಡಿಪು ತಿರುಪತಿಗೆ ಸಮರ್ಪಣೆ ಮಾಡುವ ಸಲುವಾಗಿ ಮುಡಿಪು ಪೂಜೆಯು ಶುಕ್ರವಾರ ನಡೆಯಿತು
ಈ ಸಂಧರ್ಭದಲ್ಲಿ ಕುಟುಂಬದ ಹಿರಿಯರಾದ ಕೊರಗಪ್ಪ ಗುರಸ್ವಾಮಿ ಕಾಸರಗೋಡು, ಸಮಿತಿಯ ಅಧ್ಯಕ್ಷರಾದ ಶ್ರೀಧರ್ ಬಾಳೆಕಲ್ಲು ,ಮಾಜಿ ಕಾರ್ಯದರ್ಶಿ ನಾರಾಯಣ ಪೂಜಾರಿ ಕೊರಕ್ಕೊಡು, ದೈವಗಳ ಕರ್ಮಿಯವರು,ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಪ್ರಸ್ತುತ ದೈವಸ್ಥಾನದ ವಾರ್ಷಿಕ ಜಾತ್ರೆಯು ಎಪ್ರಿಲ್ 10 ಹಾಗೂ 11 ರಂದು ನಡೆಯಲಿರುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
0 Comments