ಮದುವೆ ನಿಗದಿಯಾಗಿದ್ದ ಯುವಕ ನಾಪತ್ತೆಯಾದ ಘಟನೆ ನಡೆದಿದೆ. ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳಿಲ ದೇರಂಪಾಲು ಆರ್.ಸಿ.ಮನೆ ಶೀನಪ್ಪ ರೈಯವರ ಪುತ್ರ ಹರೀಶ್ ರೈ (38) ನಾಪತ್ತೆಯಾದ ವ್ಯಕ್ತಿ. ಈ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಹರೀಶ್ರೈಯವರಜ 13 ವರ್ಷಗಳಿಂದ ಪುತ್ತೂರು ಮಹೀಂದ್ರಾ ಫೈನಾನ್ಸ್ ಸಂಸ್ಥಯಲ್ಲಿ ಸೀನಿಯರ್ ಎಕ್ಸಿಕ್ಯುಟಿವ್ ಆಗಿ ದುಡಿಯುತ್ತಿದ್ದಾರೆ. ಅವರಿಗೆ ಸಂಬಂಧಿಕ ಯುವತಿಯ ಜತೆ ಎಪ್ರಿಲ್ 6 ರಂದು ವಿವಾಹ ನಿಶ್ಚಯವಾಗಿತ್ತು.
ಗುರುವಾರ (ಮಾರ್ಚ್ 20) ರಂದು ಬೆಳಗ್ಗೆ 7.30 ಕ್ಕೆ ಇವರು ಯುವತಿಯ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಸಾಯಂಕಾಲ 6 ಗಂಟೆಗೆ ಮನೆಗದ ತಲುಪದ ಹಿನ್ನೆಲೆಯಲ್ಲಿ ಕರೆ ಮಾಡಿದಾಗ ಮೊಬೈಲು ಫೋನು ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಯುವತಿಯ ಜತೆ ಪ್ರಶ್ನಿಸಿದಾಗ ಹರೀಶ್ ಗುರುವಾರ ಬೆಳಗ್ಗೆ ಮನೆಗೆ ಬಂದು ನನ್ನನ್ನು ಪುತ್ತೂರಿಗೆ ಕರೆದು ಕೊಂಡು ಹೋಗಿದ್ದನು. ಅನಂತರ ಪುತ್ತೂರು ಬಸ್ಸು ನಿಲ್ದಾಣದಲ್ಲಿ ಇಳಿಸಿ ತಾನು ಚಿನ್ನಾಭರಣ ಖರೀದಿಸಲು ಮಂಗಳೂರು ಹೋಗುವುದಾಗಿ ಹೇಳಿ ಹೋಗಿದ್ದು ಅನಂತರ ಮೊಬೈಲು ಪೋನ್ ಸ್ವಿಚ್ ಆಫ್ ಆಗಿತ್ತು ಎಂದು ಯುವತಿ ಹೇಳಿದ್ದಾಳೆ. ನಾಪತ್ತೆಯಾದ ಹರೀಶ್ ರೈಯವರ ಅಣ್ಣ ವೆಂಕಪ್ಪ ರೈ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ
0 Comments