Ticker

6/recent/ticker-posts

ಮುಂಡಿತ್ತಡ್ಕ ಭಜನಾ ಮಂದಿರದ ನೂತನ ಬೆಳ್ಳಿಯ ಛಾಯಾಫಲಕದ ಪುನಃಪ್ರತಿಷ್ಠಾ ಲೆಕ್ಕ ಪತ್ರ ಮಂಡನೆ


ಮುಂಡಿತ್ತಡ್ಕ : ಶ್ರೀ ಮಹಾವಿಷ್ಣು ಭಜನಾ ಮಂದಿರ ವಿಷ್ಣು ನಗರ ಮುಂಡಿತ್ತಡ್ಕ ಶ್ರೀ ದೇವರ ನೂತನ ಬೆಳ್ಳಿಯ ಛಾಯಾಫಲಕದ ಪುನಃಪ್ರತಿಷ್ಠಾ ಕಾರ್ಯಕ್ರಮದ ಲೆಕ್ಕ ಪತ್ರ ಮಂಡನೆಯ ಸಭೆಯು ಹಿರಿಯ ಸದಸ್ಯರಾದ ಚಿದಾನಂದ ಆಳ್ವ ಮಂಜಕೊಟ್ಟಿಗೆಯವರ ಅಧ್ಯಕ್ಷತೆಯಲ್ಲಿ  ಮಹಾವಿಷ್ಣು ಸಭಾಭವನದಲ್ಲಿ ಜರಗಿತು.ಲೆಕ್ಕ ಪತ್ರವನ್ನು ಭಜನಾ ಸಂಘದ ಕೋಶಾಧಿಕಾರಿಯಾದ  ಶಾಂತಕುಮಾರ್ ಮಂಡಿಸಿದರು. ಭಜನಾ ಮಂದಿರದ ಪ್ರಧಾನ ಅರ್ಚಕರಾದ ಭಾಸ್ಕರ ಪೂಜಾರಿ ಬೀರಿಕುಂಜ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಭಜನಾ ಸಂಘದ ಅಧ್ಯಕ್ಷರಾದ ವಿನೋದ್ ಕುಮಾರ್ ಏಳ್ಕಾನ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಭಜನಾ ಮಂದಿರದ ಸ್ಥಾಪಕ ಸದಸ್ಯರಾದ ರಾಮ್ ಕುಮಾರ್ ಮುಜುಕುಮೂಲೆ ಪ್ರಸ್ತಾಪಿಸಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಪ್ರಧಾನ ಕಾರ್ಯದರ್ಶಿ  ಸೂರ್ಯಪ್ರಕಾಶ್ ಶೇಡಿಮೂಲೆ ಧನ್ಯವಾದವಿತ್ತರು.ಭಜನಾ ಸಂಘದ ಜೊತೆ ಕಾರ್ಯದರ್ಶಿ  ಸುನಿಲ್ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು.ಸಂಘದ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments