Ticker

6/recent/ticker-posts

ಏಳ್ಕಾನ ಗುತ್ತು ದೊಡ್ಡಮನೆಯಲ್ಲಿ ಏ.25ರಿಂದ ಧರ್ಮನೇಮೋತ್ಸವ

 


ಪುತ್ತಿಗೆ : ಏಳ್ಕಾನ ಗುತ್ತು ದೊಡ್ಡಮನೆಯಲ್ಲಿ ಶ್ರೀ ಧೂಮಾವತಿ ರಕ್ತೇಶ್ವರಿ ಪರಿವಾರ ದೈವಗಳ ಧರ್ಮ ನೇಮೋತ್ಸವ ಏ.25ರಿಂದ 27ರ ತನಕ ಜರಗಲಿದೆ. ಇದರ ಅಂಗವಾಗಿ ಗೊನೆ ಮುಹೂರ್ತ ಶುಕ್ರವಾರ ಪೂರ್ವಾಹ್ನ ಜರಗಿತು. 


ಏ.25ಕ್ಕೆ ಬೆಳಿಗ್ಗೆ ಗಂಟೆ 8.30ರಿಂದ ಗಣಹೋಮ, 9.30ಕ್ಕೆ ರಕ್ತೇಶ್ವರಿ ನಾಗಬನದಲ್ಲಿ ತಂಬಿಲ, ಮಧ್ಯಾಹ್ನ 12 ಗಂಟೆಗೆ ರಕ್ತೇಶ್ವರಿ ದೈವಕ್ಕೆ ನೂತನ ಆಯುಧ ಸಮರ್ಪಣೆ, ಸಂಜೆ 6 ಗಂಟೆಯಿಂದ ಹರಿಸೇವೆ, ರಾತ್ರಿ 7.30ರಿಂದ ರಕ್ತೇಶ್ವರಿ ದೈವದ ತೊಡಂಞಲ್, ರಾತ್ರಿ‌ 10 ಗಂಟೆಯಿಂದ ಪೊಟ್ಟನ್,ಪೊಲಮರದ ಪೊಲ ಚಾಮುಂಡಿ ದೈವದ ಕೋಲ, ಏ.26ಕ್ಕೆ ಬೆಳಿಗ್ಗೆ 9ರಿಂದ ರಕ್ತೇಶ್ವರಿ ದೈವದ ಕೋಲ,ಸಂಜೆ 6 ಗಂಟೆಗೆ ಕುಂಟಿಕಾನ ಶ್ರೀ ಶಂಕರ ನಾರಾಯಣ ಮಠದಿಂದ  ಶ್ರೀ ಪೂಮಾಣಿ ಕಿನ್ನಿಮಾಣಿ ದೈವದ ಕೀರ್ವಾಳು, ಶ್ರೀಧೂಮಾವತಿ ದೈವದ ಭಂಡಾರ ಆಗಮನ, ರಾತ್ರಿ 8 ಗಂಟೆಗೆ ಕುಂಟಿಕಾನ ಮಠದಲ್ಲಿ ಕಾರ್ತಿಕ ಪೂಜೆ, ಬ್ದಾಹ್ಮಣ ಸಂತರ್ಪಣೆ, ಏ.27ಕ್ಕೆ ದೊಡ್ಡಮನೆಯಲ್ಲಿ ಪ್ರಾತಃಕಾಲ 5.30ಗಂಟೆಯಿಂದ ಶ್ರೀ ಪೂಮಾಣಿ ಕಿನ್ನಿಮಾಣಿ ಮತ್ತು ಒಂದು ಕುಂದ ನಲ್ವತ್ತು ದೈವಗಳ ಕೋಲ ಜರಗಲಿದೆ.
ಬೆಳಿಗ್ಗೆ 9.30 ಗಂಟೆಯಿಂದ ಧರ್ಮದೈವ ಧೂಮಾವತಿ ಧರ್ಮ ನೇಮ,ಮಧ್ಯಾಹ್ನ 3ರಿಂದ ಮಾರಣ ಗುಳಿಗ ಕೋಲ, ರಾತ್ರಿ 8.30 ಯಿಂದ ಕೊರತಿ ಅಮ್ಮನ ಅಗೇಲು ಜರಗಲಿದೆ.
ಏ.28 ಕ್ಕೆ ಸಂಜೆ 6 ಗಂಟೆಯಿಂದ ಎಲಿಯಾನದಲ್ಲಿ ಕಲ್ಲುರ್ಟಿ ಗೆ ಅಗೇಲು, ಪಂಜುರ್ಲಿ ಗೆ ತಂಬಿಲದೊಂದಿಗೆ ಉತ್ಸವ ಸಮಾಪ್ತಿಗೊಳ್ಳಲಿದೆ.

Post a Comment

0 Comments