Ticker

6/recent/ticker-posts

Ad Code

ಅಡ್ಕಸ್ಥಳದಲ್ಲಿ ಧ.ಗ್ರಾ. ಯೋಜನೆಯ ಒಂದು ಸಾವಿರ ವಾರದ ಸಭೆ ಉದ್ಘಾಟನೆ ಹಾಗೂ ವಾರ್ಷಿಕೋತ್ಸವ

 


ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ‌.ಟ್ರಸ್ಟ್ ನ ಒಂದು ಸಾವಿರ ವಾರದ ಸಭೆ ಉದ್ಘಾಟನೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ 

 


ಅಡ್ಕಸ್ಥಳ ರಾಮೋಜಿಗುಳಿ ರಾಮ್ ಭಟ್ಟ ಅವರ ಮನೆಯ ಆವರಣದಲ್ಲಿ ನಡೆಯಿತು.  ಭಾಗ್ಯಶ್ರೀ ಸಂಘದ 1,000 ವಾರದ ಸಭೆಯ ವಾರ್ಷಿಕೋತ್ಸವ ನಡೆಸಲಾಯಿತು. ಉದಯಗಿರಿ ಕುದ್ದುಪದವು ಶಾಲೆಯ ಶಿಕ್ಷಕರಾದ ವಿಠಲ.ಜಿ ಯವರು ಕಾರ್ಯಕ್ರಮ ಉದ್ಘಾಟಿಸಿದರು. 
ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್ ಅವರು ಸೂಕ್ತ ಮಾಹಿತಿ ನೀಡಿದರು, ಯೋಜನೆಯ ಕೃಷಿ ಅಧಿಕಾರಿ ಚಿದಾನಂದ ಹಾಗೂ ಕೇಪು ವಲಯದ ಮೇಲ್ವಿಚಾರಕರಾದ ಜಗದೀಶ್ , ಎಣ್ಮಕಜೆ ಪಂಚಾಯಿತಿನ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ  ಜಯಶ್ರೀ ಕುಲಾಲ್, ಕಾನ ತಡ್ಕ ಶಾಲೆಯ ಮುಖ್ಯ ಶಿಕ್ಷಕ ಐತ್ತಪ್ಪ ನಾಯ್ಕ್ ಒಕ್ಕೂಟದ ಅಧ್ಯಕ್ಷರಾದ ಪುಷ್ಪಕರ ರೈ, ಅಧ್ಯಕ್ಷರಾದ ಮಹಾಲಿಂಗ ಪಾಟಾಲಿ, ಸೇವಾ ಪ್ರತಿನಿಧಿ ಗಾಯತ್ರಿ ಎಸ್, ನಿಕಟಪೂರ್ವ ಅಧ್ಯಕ್ಷರಾದ ಆನಂದ ಕುಲಾಲ್, ಒಕ್ಕೂಟದ ಪದಾಧಿಕಾರಿಗಳಾದ ಮೀನಾಕ್ಷಿ, ಮಾಲತಿ, ರಮೇಶ, ಶ್ಯಾಮಲ, ನಿಕಟ ಪೂರ್ವ ಸೇವಾ ಪ್ರತಿನಿಧಿಗಳಾದ, ಆನಂದ ನಾಯ್ಕ ಅಶೋಕ, ವಿಜಯ, ನಲ್ಕ ಒಕ್ಕೂಟದ ಮಾಜಿ ಅಧ್ಯಕ್ಷರು, ವಿ ಎಲ್ ಈ ಪ್ರಜ್ಞಾ,  ಭಾಗ್ಯಶ್ರೀ ಸಂಘದ ಸದಸ್ಯರು, ಕುಟುಂಬ ಶ್ರೀ ಸಂಘದ ಸದಸ್ಯರು ಭಾಗವಹಿಸಿದ್ದರು.ಸಂಘದ ಸದಸ್ಯರು ಪ್ರಾರ್ಥಿಸಿ 
ಲಲಿತಾ ಸ್ವಾಗತಿಸಿ ರೇವತಿ ವರದಿ ವಾಚಿಸಿದರು. ದೇವಕಿ ಆರ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments