ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಹಾಗೂ ಶ್ರೀ ವಾಣಿ ವಿಲಾಸ ಅನುದಾನಿತ ಶಾಲೆ ತೊಟ್ಟೆತ್ತೋಡಿ ಇದರ ಸಂಚಾಲಕಿ, ಪ್ರಗತಿಪರ ಕೃಷಿಕರಾಗಿದ್ದ ಚಿಗುರುಪಾದೆ ಬಳಿಯ ತೊಟ್ಟೆತ್ತೋಡಿ ನಿವಾಸಿ ಶ್ರೀಮತಿ ಪ್ರೇಮಾ ಕೆ ಭಟ್ (80) ರವರು ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ನಿನ್ನೆ (ಬುದವಾರ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಮೀಯಪದವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಮಲರಾಯ ಬಂಟ ದೈವ ಕ್ಷೇತ್ರ ಬುಡ್ರಿಯ ಇದರ ಸೇವಾಟ್ರಸ್ಟ್ ನ ಅಧ್ಯಕ್ಷರಾಗಿದ್ದರು. ಮೃತರು ದಿ.ಕೇಶವ ಭಟ್ ರ ಧರ್ಮಪತ್ನಿಯಾಗಿದ್ದು, ಮಕ್ಕಳಾದ: ಕ.ಸಾ.ಪ ಕೇರಳ ಗಡಿನಾಡ ಘಟಕ ಅಧ್ಯಕ್ಷರಾದ ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಉಮಾಶಂಕರಿ, ಪ್ರಮೀಳ ಚುಳ್ಳಿಕ್ಕಾನ, ಕುಸುಮ, ಸೊಸೆ: ಶುಭಜೆ.ಪಿ, ಅಳಿಯಂದಿರಾದ ಮಣಿಪಾಲದ ಪ್ರಸಿದ್ದ ಜಿಯಾಲಜಿಸ್ಟ್ ಉದಯಶಂಕರ್, ಕೃಷ್ಣ ಚುಳ್ಳಿಕ್ಕಾನ, ಚಂದ್ರಶೇಖರ ಮೂಡುಬಿದಿರೆ, ಸಹೋದರರಾದ: ದ.ಕ ಖ್ಯಾತ ಕೃಷಿ ತಜ್ಞ ಬದನಾಜೆ ಶಂಕರ ಭಟ್ ಹಾಗೂ ಮಂಗಳೂರಿನ ಮಂಗಳಾ ನರ್ಸಿಂಗ್ ಹೋಂ ನ ವೈದ್ಯರಾದ ಡಾ.ಗಣಪತಿ ಭಟ್ ಮೊದಲಾದವರನ್ನು ಅಗಲಿದ್ದಾರೆ. ಮೃತರ ಮನೆಗೆ ಕ.ಸಾ.ಪ ಕೇಂದ್ರೀಯ ಅಧ್ಯಕ್ಷರಾದ ಮಹೇಶ್ ಜೋಷಿ ಸಹಿತ ಹಲವಾರು ಗಣ್ಯರು ಆಗಮಿಸಿ ಅಂತಿಮ ದರ್ಶನಗೈದರು. ಮೃತರ ಅಂತ್ಯಕ್ರಿಯೆಯು ಇಂದು ಮದ್ಯಾಹ್ನ 1 ಗಂಟೆಗೆ ಮನೆ ಪರಿಸರದಲ್ಲಿ ನಡೆಯಲಿದೆ.
0 Comments