ಪೆರ್ಲ : ರವಿವಾರ ರಾತ್ರಿ ಮುಂಡಿತ್ತಡ್ಕದಲ್ಲಿ ನಡೆದ ವಿಷ್ಣುಮೂರ್ತಿ ಕೆಂಡಸೇವೆಯ ಮೇಲೇರಿಯ ಮೇಲೆ ಮೂಡಿ ಬಂದ ಸಾಕ್ಷತ್ ಮಹಾವಿಷ್ಣು ದೈವದ ಅಭಯರೂಪ ಭಕ್ತರನ್ನು ಮೂಕ ವಿಸ್ಮಿತಗೊಳಿಸಿದೆ. ಕಳೆದ ಅರ್ಧ ಶತಮಾನದಷ್ಟು ಇತಿಹಾಸ ಇರುವ ಇಲ್ಲಿನ. ಕಾರಣೀಕ ದೈವ ವಿಷ್ಣುಮೂರ್ತಿಯ ಆರಾಧನೆ ಈ ಮಣ್ಣಿನಲ್ಲಿ ವಿವಿಧ ರೀತಿಯಲ್ಲಿ ಜರಗುತ್ತಾ ಬರುತ್ತಿದೆ.ಇದರಲ್ಲಿ ಪ್ರಮುಖವಾದುದೇ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಕೆಂಡಸೇವಾ ಮಹೋತ್ಸವ.
ಇಲ್ಲಿನ ಭಕ್ತ ಜನತೆ ಅತ್ಯಂತ ಭಕ್ತಿ ಪ್ರಧಾನವಾಗಿ ಕೊಂಡಾಡುವ ಈ ಒತ್ತೆಕೋಲ ಮಹೋತ್ಸವದಲ್ಲಿ ಕೆಂಡ ಸೇವೆಯು ವಿಷ್ಣುಮೂರ್ತಿ ದೈವಕ್ಕೆ ಅತ್ಯಾಪ್ತವಾದ ಸೇವೆಯಾಗಿದೆ. ಇದಕ್ಕಾಗಿ ಕೋಲದ ಸಾಕಷ್ಟು ಮುಂಚಿತವಾಗಿಯೇ ಭಕ್ತರು ಹರಕೆ ರೂಪದಲ್ಲಿ ತಮ್ಮಇಷ್ಟಾರ್ಥ ಸಿದ್ಧಿಗಾಗಿ ಈ ಸೇವೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷತೆಯಾಗಿದೆ.
0 Comments