Ticker

6/recent/ticker-posts

ರಾಜ್ಯದಲ್ಲಿ ತಾಪಮಾನ ಏರಿಕೆ ಸಾಧ್ಯತೆ, ಎಂಟು ಜಿಲ್ಲೆಗಳಲ್ಲಿ ಎಚ್ಚರ ವಹಿಸಲು ಆದೇಶ


 ತಿರುವನಂತಪುರಂ: ರಾಜ್ಯದಲ್ಲಿ ‌ಮುಂದಿನ ದಿನಗಳಲ್ಲಿ ತಾಪಮಾನ ಏರುವ ಸಾಧ್ಯತೆಯಿದೆಯೆಂದು ಹವಾಮಾನ ಇಲಾಖೆ ವರದಿ ಮಾಡಿದೆ. ಕಾಸರಗೋಡು, ಕಣ್ಣೂರು, ಕೋಜಿಕ್ಕೋಡ್, ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್, ಕೊಲ್ಲಂ, ತಿರುವನಂತಪುರಂ ಜಿಲ್ಲೆಗಳಲ್ಲಿ ಅಧಿಕ ತಾಪಮಾನ ಕಾಣಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಎಚ್ಚರ ವಹಿಸಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ. 35  ರಿಂದ 37 ಡಿಗ್ರಿ ವರೆಗೆ ತಾಪಮಾನ ಅಧಿಕವಾಗುವ ಸಾಧ್ಯತೆಯಿದೆ. ಅದೇ ರೀತಿ ಯಾವುದೇ ಮುನ್ಸೂಚನೆಯಿಲ್ಲದೆ ಮಳೆ, ಗಾಳಿ, ಸಿಡಿಲು, ಮಿಂಚು ಕಾಣಿಸಿಕೊಳ್ಳಲಿದೆ.

Post a Comment

0 Comments