Ticker

6/recent/ticker-posts

ಪ್ರಧಾನಮಂತ್ರಿ ತಿರುವನಂತಪುರಂ ಬೇಟಿ ಘೋಷಣೆ ಬೆನ್ನಿಗೆಯೇ ವ್ಯಾಪಕಗೊಂಡ ನಕಲಿ ಬಾಂಬು ಇಮೇಲ್ ಸಂದೇಶ, ತನಿಖಾಧಿಕಾರಿಗಳಲ್ಲಿ ಗೊಂದಲ


 ತಿರುವನಂತಪುರಂ:   ತಿರುವನಂತಪುರಂ ವಿಯಿಂಜಂ ಬಂದರು ಉದ್ಘಾಟನೆ ದಿನಾಂಕ ನಿಶ್ಚಯಗೊಂಡ ಬೆನ್ನಿಗೆಯೇ ನಕಲಿ ಇಮೇಲು ಬಾಂಬು ಬೆದರಿಕೆ ಬರುತ್ತಿರುವುದು ಕೇರಳದ ತನಿಖಾ ತಂಡಗಳನ್ನು ಇಕ್ಕಟ್ಟಿಗೆ ತಳ್ಳಿದೆ.  ಮೇ. 2 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಯಿಝಂ ಬಂದರನ್ನು ನಾಡಿಗೆ ಸಮರ್ಪಿಸಲಿರುವರು. ಈ ಮಾಹಿತಿ ಬಹಿರಂಗಗೊಂಡ ಬೆನ್ನಿಗೆಯೇ ನಕಲಿ ಬಾಂಬು ಸಂದೇಶಗಳು ಒಂದರ ಹಿಂದೆ ಒಂದರಂರೆ ಬರತೊಡಗಿದೆ.

   ಕಳೆಯ ಎರಡು ವಾರಗಳಲ್ಲಿ 12 ಕ್ಕೂ ಹೆಚ್ಚು ನಕಲಿ ಬಾಂಬು ಇಮೇಲ್ ಸಂದೇಶಗಳು ಬಂದಿದೆ. ನಿನ್ನೆ (ಆದಿತ್ಯವಾರ) ತಿರುವನಂತಪುರಂ ವಿಮಾನ‌ ನಿಲ್ದಾಣದಲ್ಲಿ ಬಾಂಬು ಇರಿಸಲಾಗಿದೆ ಎಂಬ ಬೆದರಿಕೆ ಸಂದೇಶ ಇಮೇಲ್ ಮೂಲಕ ತಲುಪಿದೆ.

    ರಾಷ್ಟ್ರಪತಿ, ಪ್ರಧಾನಮಂತ್ರಿ ಸಹಿತ ವಿಐಪಿಗಳು ಆಗಮಿಸುವ ಮುನ್ನವೇ ಸುರಕ್ಷೆಯ ದೃಷ್ಟಿಯಿಂದ ಕೇಂದ್ರ ಇಂಟಲಿಜೆನ್ಸ್ ಅಧಿಕಾರಿಗಳು ಆಗಮಿಸುವುದು ಸಾದಾರಣ ಪ್ರಕ್ರಿಯೆಯಾಗಿದೆ.  ಇದೀಗ ತಿರುವನಂತಪುರಂಗೆ ಬಂದ ಕೇಂದ್ರ ಇಂಟಲಿಜೆನ್ಸ್ ಅಧಿಕಾರಿಗಳಿಗೆ ನಕಲಿ ಬಾಂಬು ಬೆದರಿಕೆಯ ತನಿಖೆ ಮಾಡುತ್ತಿರುವ ಕೇರಳ ಪೊಲೀಸರ ಅಸಹಾಯಕ ಸ್ಥಿತಿ ಮತ್ತಷ್ಟು ಗೊಂದಲ ಉಂಟಾಗಲು ಕಾರಣವಾಗಿದೆ. ಇಷ್ಟೆಲ್ಲ ಇಮೇಲ್ ಸಂದೇಶ ಬಂದಿದ್ದರೂ ಇದರ ಮೂಲ ಎಲ್ಲಿ ಎಂಬ ಬಗ್ಗೆ ತಿಳಿಯಲು ಪೊಲೀಸರಿಂದ ಸಾಧ್ಯವಾಗಿಲ್ಲ. ವಿದೇಶಗಳಿಂದ ಇಮೇಲ್ ಸಂದೇಶ ಬರುತ್ತಿದೆ ಎಂಬ ಸಂಶಯವಿದ್ದರೂ ನಿಖರ ಮಾಹಿತಿ ಪೊಲೀಸರಿಗೆ ಲಭಿಸಿಲ್ಲ. ಈ ಬಗ ಕೇಂದ್ರ ಇಂಟಲಿಜೆನ್ಸ್ ಪ್ರತ್ಯೇಕ ತನಿಖೆ ಆರಂಭಿಸಿದೆ. ಕೇರಳದಲ್ಲಿ ಸಂಪರ್ಕವಿರುವ ಭಯೋತ್ಪಾದಕ ಸಂಘಟನೆಗಳು ನಕಲಿ ಇಮೇಲ್ ಸಂದೇಶದ ಹಿಂದೆಯಿದೆಯೇ ಎಂಬ ಶಂಕೆಯೂ ಇದೆ.

Post a Comment

0 Comments