Ticker

6/recent/ticker-posts

ಉಸಿರಾಟದ ತೊಂದರೆ‌ ಕಾಣಿಸಿಕೊಂಡ ಯುವತಿ ಆಸ್ಪತ್ರೆಯಲ್ಲಿ‌ ಮೃತ್ಯು


 ಬದಿಯಡ್ಕ:   ಉಸಿರಾಟದ ತೊಂದರೆ ಕಾಣಿಸಿಕೊಂಡ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಬಂಬ್ರಾಣ, ಚೂರಿತ್ತಡ್ಕ, ಸಂತೋಷ್ ನಗರದ ನಿವಾಸಿ ದಿವಂಗತ ನಾರಾಯಣ- ರುಕ್ಮಿಣಿ ದಂಪತಿಯ ಪುತ್ರಿ ಜ್ಯೋತಿ (27)  ಮೃತಪಟ್ಟ ಯುವತಿ. ಇವರು ಕನ್ನೆಪ್ಪಾಡಿ ಬಳಿಯ ಮಾಡತ್ತಡ್ಕ ಕ್ವಾಟರ್ಸಿನಲ್ಲಿ ವಾಸಿಸುತ್ತಿದ್ದಾರೆ.  ಸೋಮವಾರ ತಡರಾತ್ರಿ 1 ಗಂಟೆಯ  ವೇಳೆ  ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಕೂಡಲೇ ಕಾಸರಗೋಡು ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತು. ಆಸ್ಪತ್ರೆಯಲ್ಲಿ  ಪರಿಶೋಧನೆ ನಡೆಸಿದ ಡಾಕ್ಟರು, ಈಕೆ ಮೃತಪಟ್ಟಳೆಂದು ತಿಳಿಸಿದರೆನ್ನಲಾಗಿದೆ. ಬದಿಯಡ್ಕ ಪೊಲೀಸರು ಅಸಹಜ ಸಾವು ಸಂಬಂಧಿಸಿದಂತೆ ಕೇಸು ದಾಖಲಿಸಿದರು. ಮೃತರು ತಾಯಿ, ಪತಿ ಧೀರಜ್, ಸಹೋದರರಾದ ಜೀವನ್, ಜಿತೇಶ್ ಎಂಬಿವರನ್ನು ಅಗಲಿದ್ದಾರೆ

Post a Comment

0 Comments