Ticker

6/recent/ticker-posts

ಮಗ‌ ಮೃತಪಟ್ಟ ಒಂಬತ್ತನೇ ದಿನ ತಂದೆ‌ ನಿಧನ


 ಕುಂಬಳೆ:  ಮಗ ಮೃತಪಟ್ಟ  9 ನೇ ದಿನ ತಂದೆಯೂ ಮೃತಪಟ್ಟ  ಘಟನೆ ನಡೆದಿದೆ. ಕುಂಬಳೆ‌ ಮಾವಿನಕಟ್ಟೆ ನಿವಾಸಿ ಸಕ್ರಿಯ ಸಿಪಿಎಂ ‌ಕಾರ್ಯಕರ್ತ ಕೃಷ್ಣ ಚೆಟ್ಟಿಯಾರ್ ಇಂದು (ಬುದವಾರ) ಬೆಳಗ್ಗೆ ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ಮೃತಪಟ್ಡಿದ್ದಾರೆ.

  ಕೃಷ್ಣ ಚೆಟ್ಟಿಯಾರರ ಪುತ್ರ ದಿನೇಶ ಎಪ್ರಿಲ್ 15 ರಂದು ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದರು. ಕೃಷ್ಣ ಚೆಟ್ಟೊಯಾರ್ ರಿಗೆ ಬೈಪಾಸ್ ಶಸ್ತ್ರಕ್ರಿಯೆ ನಡೆದಿದ್ದು ದಿನೇಶ್ ಬಿಟ್ಟು ಉಳಿದವರೆಲ್ಲರೂ ಮಂಗಳೂರು ಆಸ್ಪತ್ರೆಗೆ ತೆರಳಿದ್ದರು. ಎಪ್ರಿಲ್ 15 ರಂದು ಸಹೋದರ ‌ಮನೆಗೆ ಬಂದಾಗ ದಿನೇಶ್‌ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೊಲೀಸರು ಆಗಮಿಸಿ ಬಾಗಿಲು ಮುರಿದು ಪ್ರವೇಶಿಸಿ ಮೃತದೇಹವನ್ನು  ಹೊರಗೆ ತಂದಿದ್ದರು

ದಿನೇಶರ ಅಂತ್ಯಕ್ರಿಯೆಯ ವೇಳೆ ತಂದೆ ಕೃಷ್ಣ ಚೆಟ್ಟಿಯಾರನ್ನು ಕರೆತರಲಾಗಿತ್ತು. ಅನಂತರ ಕೃಷ್ಣ ಚೆಟ್ಟಿಯಾರರ ಆರೋಗ್ಯ ಹದಗೆಟ್ಟಿದ್ದು ಕಣ್ಣೂರು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗದಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಅವರನ್ನು ‌ಮನೆಗೆ ಕರೆತರಲಾಯಿತು. ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದರು.

Post a Comment

0 Comments