Ticker

6/recent/ticker-posts

ಒನ್ ಲೇನ್ ಟ್ರೇಡಿಂಗ್ ಹೆಸರಿನಲ್ಲಿ ಅಂಗಡಿಮೊಗರು‌ ನಿವಾಸಿಯ 42.41 ಲಕ್ಷ ರೂ ಪಡೆದು ವಂಚನೆ, ಸೈಬರ್ ಪೊಲೀಸರಿಂದ ತನಿಖೆ ಆರಂಭ.


 ಕಾಸರಗೋಡು: ಒನ್ ಲೇನ್ ವಂಚನೆಯಿಂದಾಗಿ ವ್ಯಕ್ತಿಯೋರ್ವರು 42.41 ಲಕ್ಷ ರೂ ಕಳಕೊಂಡಿರುವುದಾಗಿ ತಿಳಿದು ಬಂದಿದೆ. ಅಂಗಡಿಮೊಗರು ನಿವಾಸಿ ಅಬೂಬಕರ್ ಎಂಬವರು ನೀಡಿದ ದೂರಿನಂತೆ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

   2025 ಫೆಬ್ರವರಿ 4 ರಂದು ಅಬೂಬಕರ್ ಅವರನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿದ ವ್ಯಕ್ತಿ ಒನ್ ಲೇನ್ ವ್ಯಾಪಾರ ಹಾಗೂ ಅದರ ಲಾಭದ ಬಗ್ಗೆ ಹೇಳಿದನೆನ್ನಲಾಗಿದೆ. ಅದರಂತೆ ಅಬೂಬಕರ್ ಅವರು ವ್ಯಕ್ತಿ ಹೇಳಿದ ಅಪ್ಲಿಕೇಶನ್ ಡೌನ್ಲೋಡ್ ಮಾಡಿದ್ದರು. ಅನಂತರ ವ್ಯಕ್ತಿ ಹೇಳಿದ ರೀತಿ ಟ್ರೇಡಿಂಗ್ ಆರಂಭಿಸಿದರು. ಎಪ್ರಿಲ್ 4 ರಿಂದ 21 ರ ವರೆಗೆ ಅಬೂಬಕರ್ ಅವರು ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಿದ್ದರು. ಕೊನೆಗೆ ಲಾಭವೂ ಅಸಲು ಇಲ್ಲದಾದಾಗ ಅವರು ಪೊಲೀಸರಿಗೆ ದೂರು ನೀಡಿದ್ದಾರೆ

Post a Comment

0 Comments