Ticker

6/recent/ticker-posts

ಶಿಶ್ತು ಉಲ್ಲಂಘನೆ, ಬಿಜೆಪಿ‌ ಮಂಜೇಶ್ವರ ಮಂಡಲ ಸದಸ್ಯ‌ಕೆ.ಪಿ.ಪ್ರಶಾಂತ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು, ಜವಾಬ್ದಾರಿಯಿಂದಲೂ ಮುಕ್ತ


 ಕಾಸರಗೋಡು: ಬಿಜೆಪಿಯ ಸಂಘಟನಾ ರೀತಿಗೆ ವಿರುದ್ದವಾಗಿ ಕಾರ್ಯಾಚರಿಸಿ ಪಕ್ಷದ ಶಿಸ್ತು ಉಲ್ಲಂಘಿಸಿದ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಸದಸ್ಯ ಕೆ.ಪಿ.ಪ್ರಶಾಂತ್ ಎಂಬವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಕೈಬಿಡಲಾಗಿದೆಯೆಂದು ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್.ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶಿಸ್ತು ಉಲ್ಲಂಘನೆಯ ಹಿನ್ನೆಲೆಯಲ್ಲಿ ಕೆ.ಪಿ.ಪ್ರಶಾಂತ್ ಅವರಿಗೆ ಜಿಲ್ಲಾಧ್ಯಕ್ಷರು ನೋಟೀಸ್ ನೀಡಿದ್ದರು.ಆದರೆ ಈ ನೋಟೀಸ್ ಪಡೆಯಲು ಹಾಗೂ ಅದಕ್ಕೆ ಉತ್ತರ ನೀಡಲು ಕೆ.ಪಿ.ಪ್ರಶಾಂತ್ ಸಿದ್ದರಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಾಥಮಿಕ ಸದಸ್ಯತನದಿಂದ ಸಸ್ಪೆಂಡ್ ಮಾಡಲು ಹಾಗೂ ಜವಾಬ್ದಾರಿಗಳಿಂದ ಕೈ ಬಿಡಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಪತ್ರಿಕಾ ಹೇಳಿಕೆ ತಿಳಿಸಿದೆ

Post a Comment

0 Comments