Ticker

6/recent/ticker-posts

ವಳಮಲೆ ಪದ್ಮನಾಭ ಶೆಟ್ಟಿ ಗೆ ಕುಂಬಡಾಜೆ ಬಂಟರ ಸಂಘದಿಂದ ನುಡಿ ನಮನ


 ಬದಿಯಡ್ಕ : ಹಲವು ವರ್ಷಗಳ ಕಾಲ ಬಂಟರ ಸಂಘ ದ ಫಿರ್ಕಾ ಸಮಿತಿ ಅಧ್ಯಕ್ಷರಾಗಿ ಹಾಗೂ ಅನೇಕ ದಶಕ ಗಳ ಕಾಲ ಬಂಟರ ಸಂಘದಲ್ಲಿ ಸಕ್ರೀಯರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ದಿ| ವಳಮಲೆ ಪದ್ಮನಾಭ ಶೆಟ್ಟಿ ಯವರಿಗೆ  ಕುಂಬಡಾಜೆ ಬಂಟರ ಸಂಘ ದ ನುಡಿನಮನ ಕಾರ್ಯಕ್ರಮ  ಗಾಡಿಗುಡ್ಡೆಯಲ್ಲಿ ಜರಗಿತು.   

ಕುಂಬಡಾಜೆ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ರೈ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಶ್ರೀ ಯತೀಶ್ ಕುಮಾರ್ ರೈ , ಬಂಟರ ಸಂಘಧ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀ ಸಂಜೀವ ಶೆಟ್ಟಿ ಮೊಟ್ಟೆಕುಂಜ, ಶ್ರೀ ಸುಧೀರ್ ಕುಮಾರ್ ರೈ ಗಾಡಿಗುಡ್ಡೆ , ರಾಮಣ್ಣ ಶೆಟ್ಟಿ ಬೆಳಿಂಜ ಇವರು ಪದ್ಮನಾಭ ಶೆಟ್ಟ ರ ಕೊಡುಗೆ ಹಾಗು ತಮ್ಮ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡರು.  

ಕಾರ್ಯದರ್ಶಿ ಅಮೃತ್ ರಾಜ್ ರೈ ಸ್ವಾಗತಿಸಿ , ಉಪಾಧ್ಯಕ್ಷರಾದ ಹರ್ಷಕುಮಾರ್ ರೈ ಧನ್ಯವಾದ ಸಮರ್ಪಿಸಿದರು.

Post a Comment

0 Comments