ಮಂಜೇಶ್ವರ: ನಾಪತ್ತೆಯಾದ ಮದ್ಯ ವಯಸ್ಕನ ಮೃತದೇಹ ಮನೆಯಿಂದ ಅರ್ದ ಕಿ.ಮೀಟರ್ ದೂರದಲ್ಲಿರುವ ಕಾಡಿನಲ್ಲಿ ಪತ್ತೆಯಾಗಿದೆ. ವರ್ಕಾಡಿ ಉಜಾರ್ ನಿವಾಸಿ ಥೋಮಸ್.ಡಿ.ಸೋಜ (72) ರ ಮೃತದೇಹ ನಿನ್ನೆ (ಗುರುವಾರ) ಪತ್ತೆಯಾಗಿದೆ.
ಮೇ 12 ರಂದು ಸಾಯಂಕಾಲ ಥೋಮಸ್ ಡಿ.ಸೋಜ ನಾಪತ್ತೆಯಾಗಿದ್ದರು. ಈ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದ್ದರು. ಸಂಬಂಧಿಕರು ಹುಡುಕಾಡುತ್ತಿದ್ದಂತೆಯೇ ಮೃತದೇಹ ಕಂಡು ಬಂದಿದೆ. ಮೃತದೇಹದ ಬಳಿ ಮದ್ಯದ ಬಾಟಲಿ, ವಿಷದ ಬಾಟಲಿಯ ರೀತಿಯದ್ದೂ ಲಭಿಸಿತ್ತೆಂದು ಪೊಲೀಸರು ತಿಳಿಸಿದ್ದಾರೆ
0 Comments