ಮಂಗಳೂರು: ಸಕ್ರಿಯ ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ.
ಶಾಂತಿಗುಡ್ಡೆ ಪೇಜಾವರ ಗ್ರಾಮದ ನಿವಾಸಿ ಚಾಲಕ ಅಬ್ದುಲ್ ಸಫ್ಘಾನ್ (29). ಬಜ್ಜೆ ನಿವಾಸಿ ಹೆಲ್ಪರ್ ಕೆಲಸ ಮಾಡುವ ನಿಯಾಝ್ (28).ಕೆಂಜಾರು ನಿವಾಸಿ ಸೌದಿ ಅರೇಬಿಯಾದಲ್ಲಿ ಉದ್ಯೋಗಿ ಆಗಿರುವ ಮುಹಮ್ಮದ್ ಮುಝಮ್ಮಿಲ್ (32). ಕಳವಾರು ನಿವಾಸಿ, ಬೆಂಗಳೂರಿನಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ಕಲಂದರ್ ಶಾಫಿ (31). ಚಿಕ್ಕಮಗಳೂರಿನ ಕಳಸ ನಿವಾಸಿ ಚಾಲಕ ರಂಜಿತ್ (19), ಚಿಕ್ಕಮಗಳೂರಿನ ಕಳಸ ನಿವಾಸಿ ಮಾರಿ ನಾಗರಾಜ್ (20)
ಜೋಕಟ್ಟೆ ನಿವಾಸಿ ಮುಹಮ್ಮದ್ ರಿಝಾನ್(28) ಆದಿಲ್ ಮೆಹರೂಫ್. (ಈತ 2022 ರಲ್ಲಿ ಕೊಲೆಯಾದ ಫಾಝಿಲ್ ಅವರ ಸಹೋದರ) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ರಂಜಿತ್ ಹಾಗೂ ನಾಗರಾಜ್ ಬಾಡಿಗೆ ಹಂತಕರಿರಬೇಕು ಎಂದು ಶಂಕಿಸಲಾಗಿದೆ.
0 Comments