Ticker

6/recent/ticker-posts

Ad Code

ಗೋಡೌನ್ ಬೀಗ ಮುರಿದು ಲಕ್ಷಗಟ್ಟಲೆ ರೂ. ಬೆಲೆಯ ಕಬ್ಬಿಣದ ಸಾಮಾಗ್ರಿ ಕಳವುಗೈದ ಆರೋಪಿಯ ಸೆರೆ


 ಉಪ್ಪಳ: ಉಪ್ಪಳದಲ್ಲಿ ಗೋಡೌನ್ ಬೀಗ ಮುರಿದು ಲಕ್ಷಗಟ್ಟಲೆ ಬೆಲೆಯಿರುವ ಕಬ್ಬಿಣದ ಸಾಮಾಗ್ರಿಗಳನ್ನು ಕಳವುಗೈದ ಆರೋಪಿಯನ್ನು ಬಂಧಿಸಲಾಗಿದೆ. ಮಂಗಳೂರು ಕಸಬ ಬಂಗರ ನಿವಾಸಿ ನೂಮನ್(31) ಬಂಧಿತ ಆರೋಪಿ. ಉಪ್ಪಳದಲ್ಲಿ ಕಾರ್ಯಾಚರಿಸುತ್ತಿರುವ ವೈಟ್ ಮಾರ್ಟ್ ಎಂಬ ಸಂಸ್ಥೆಯ ಗೊಇಡೌನಿನ ಬೀಗ ಮುರಿದು ಕಬ್ಬಿಣದ ರಾಡ್,ಪೈಪು ಎಂಬಿವು ಕಳವುಗೈದು ಪಿಕಪ್ ವಾಹನದಲ್ಲಿ ಸಾಗಿಸಲಾಗಿತ್ತು. ಕಳವುಗೈದ ಸಾಮಗ್ರಿಗಳನ್ನು ಮಂಗಳೂರಿನ ಅಂಗಡಿಯೊಂದರಲ್ಲಿ ಮಾರಾಟ ಮಾಡಲಾಗಿತ್ತು. ಈ ಬಗ್ಗೆ ಮಂಜೇಶ್ವರ ಪೊಲೀಸರು ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ‌ಪತ್ತೆ ಹಚ್ಚಿ ಬಂಧಿಸಲಾಯಿತು. ಇನ್ಸ್ಪೆಕ್ಟರ್ ಅನೂಪ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಗಳಾದ ರತೀಷ್ ಗೋಪಿ, ಉಮೇಶ್, ಇತರದಾದ ರಾಜೇಶ್ ಕುಮಾರ್, ಸಜಿತ್, ವಿಜಿನ್, ರಘು, ವಂದನ, ಪ್ರಶೋಬ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Post a Comment

0 Comments