ನೀರ್ಚಾಲು : ಸಮೀಪದ ಕನ್ನೆಪ್ಪಾಡಿ ಕೊಡ್ಯಮ್ಮೆ ಅಂತಲ ಶ್ರೀ ಮೊಗೇರ ಚಾವಡಿ ದೈವಗಳ ನೇಮೋತ್ಸವ ಮೇ 3,4ಕ್ಕೆ ಜರಗಲಿದೆ. ಇದರ ಅಂಗವಾಗಿ ಇಂದು ಬೆಳಗ್ಗೆ ಶುದ್ಧಿ ಕಲಶ ಗಣಪತಿ ಹೋಮ, ಪೂರ್ವಾಹ್ನ 10 ಗಂಟೆಗೆ ಶ್ರೀ ಗುಳಿಗೆ ದೈವದ ಕೋಲ, ಪ್ರಸಾದ ವಿತರಣೆ,ಮಧ್ಯಾಹ್ನ ಪ್ರಸಾದ ಭೋಜನ, ಅಪರಾಹ್ನ 2 ಗಂಟೆಯಿಂದ ಶ್ರೀ ಮೈಸಂದಾಯ ದೈವದ ನೇಮೋತ್ಸವ, ಸಾಯಂ 4 ಗಂಟೆಗೆ ಶ್ರೀದೈವದ ಪ್ರಸಾದ ವಿತರಣೆ, ಸಾಯಂಕಾಲ 7ರಿಂದ ಪ್ರಸಾದ ಭೋಜನ,ರಾತ್ರಿ 9:00 ರಿಂದ ಶ್ರೀಪಂಜುರ್ಲಿ ಹಾಗೂ ಕಲ್ಲುರ್ಟಿ ದೈವದ ನೇಮೋತ್ಸವ ಜರಗುವುದು.
4/05/2025 ಆದಿತ್ಯವಾರ ಪೂರ್ವಾಹ್ನ 5: ಗಂಟೆಗೆ ಶ್ರೀದೈವಗಳ ಪ್ರಸಾದ ವಿತರಣೆ,ಪೂರ್ವಾಹ್ನ 9 ರಿಂದ ಶ್ರೀ ಕುಡುಮ ದೈವದ ನೇಮೋತ್ಸವ,ಪೂರ್ವಾಹ್ನ 11 ರಿಂದ ಶ್ರೀ ದೈವದ ಪ್ರಸಾದ ವಿತರಣೆ,ಮಧ್ಯಾಹ್ನ 1 ರಿಂದ ಪ್ರಸಾದ ಭೋಜನ,ಸಾಯಂಕಾಲ 7:00ಗೆ ಶ್ರೀ ಕೊರಗುತನಿಯ ದೈವದ ಭಂಡಾರ ಇಳಿಯುವುದು,ರಾತ್ರಿ 9 ರಿಂದ ಶ್ರೀ ಕೊರಗುತನಿಯ ದೈವದ ಕೋಲೋತ್ಸವ ಜರಗುವುದು.ಬೆಳಗ್ಗೆ 4 ಗಂಟೆಗೆ ಶ್ರೀದೈವದ ಪ್ರಸಾದ ವಿತರಣೆಯೊಂದಿಗೆ ನೇಮೋತ್ಸವ ಸಮಾಪ್ತಿಗೊಳ್ಳಲಿದೆ.
0 Comments