Ticker

6/recent/ticker-posts

ಅಂತರಾಜ್ಯ ಮಟ್ಟದ ಪತ್ರಕರ್ತರಿಗೆ ನಾಳೆ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿ ಪ್ರದಾನ

 


ಕಾಸರಗೋಡು: ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕಾಸರಗೋಡು ಇದರ ನೇತೃತ್ವದಲ್ಲಿ ಕೊಡ ಮಾಡುವ ವಾರ್ಷಿಕ  ದತ್ತಿನಿಧಿ  ಪ್ರಶಸ್ತಿ ಪ್ರಧಾನ ಸಮಾರಂಭವು 

ಮೇ 3ರಂದು   ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ಜರಗಲಿದೆ.  ಕೆ.ಕೆ.ಶೆಟ್ಟಿ ಕುತ್ತಿಕಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನಿಸಲಾಗುವುದು. ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಕರ್ನಾಟಕ ರಾಜ್ಯ ಕೃಷಿ ಸಚಿವ  ಚೆಲುವರಾಯ ಸ್ವಾಮಿ, ಅರಣ್ಯ ಸಚಿವ ಈಶ್ವರ ಖಂಡ್ರೆ, ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತಿತರ ಗಣ್ಯರು ಪ್ರಶಸ್ತಿ ಪ್ರದಾನಿಸುವರು.

ವಿವಿಧ ದತ್ತಿನಿಧಿಗಳ ಪ್ರಧಾನ

ಬ್ರಹ್ಮಕ್ಯ ಎಡನೀರು ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ನೆನಪಿಗಾಗಿ ನೀಡುವ ದತ್ತಿನಿಧಿಯು ಶ್ರೀನಿವಾಸ ಜೋಕಟ್ಟೆ ಮಂಬೈ, ಪತ್ರಕರ್ತ ರವಿಬೆಳಗರೆ ಸ್ಮರಣಾರ್ಥ ಇವರ ಕುಟುಂಬ ನೀಡುವ ದತ್ತಿನಿಧಿ ಪ್ರಶಸ್ತಿಯನ್ನು ಗಣೇಶ್ ಕಾಸರಗೋಡು, ಅವ್ವ ಸೇವಾ ಟ್ರಸ್ಟ್ ನ ನೀಡುವ ದತ್ತಿನಿಧಿ ಪ್ರಶಸ್ತಿಯನ್ನು  ಶ್ರೀ ನಿವಾಸ ನಾಯಕ್ ಇಂದಾಜೆ, ಡಾ. ಸಿ.ಸೋಮಶೇಖರ ನೀಡುವ ದತ್ತಿನಿಧಿ ಪ್ರಶಸ್ತಿಯನ್ನು ಮಲ್ಲಿಕಾರ್ಜುನ ರೆಡ್ಡಿ ಗೋಂದಿ ಬೆಳಗಾವಿ, ಹವ್ವಾ ಹಸನ್ ಫೌಂಡೇಶನ್ ಕುದುಕ್ಕೋಳಿ ನೀಡುವ ದತ್ತಿನಿಧಿ ಪ್ರಶಸ್ತಿಯು ಎನ್.ರವಿ ಕುಮಾರ್ ಶಿವಮೊಗ್ಗ, ಜೋಸೆಫ್- ಮಾಥಿಯಾಸ್ ದುಬೈ ನೀಡುವ ದತ್ತಿನಿಧಿ ಪ್ರಶಸ್ತಿಯು ನಾಗರಾಜ ವೈ ಕೊಪ್ಪಳ, ಕೆ.ವಿ.ಆರ್. ಠ್ಯಾಗೋರ್ ಸ್ಮರಣಾರ್ಥ ನೀಡುವ ದತ್ತಿನಿಧಿ ಪ್ರಶಸ್ತಿಯು ಈಶ್ವರ ಅಲೆವೂರು ಮುಂಬೈ, ಭೀಮಣ್ಣ ಖಂಡ್ರೆ ಅವರ ಹೆಸರಿನ ದತ್ತಿನಿಧಿ ಪ್ರಶಸ್ತಿಯು ಮೊಹಮ್ಮದ್ ಅನ್ಸಾರ್ ಇನೋಳಿ, ಸುಽರ್ ಕುಮಾರ್ ಶೆಟ್ಟಿ ಎಣ್ಮಕಜೆ ನೀಡುವ ದತ್ತಿನಿಧಿ ಪ್ರಶಸ್ತಿ ಸಿ.ಜೆ.ಪುನೀತ್ ಮೈಸೂರು, ಸೋಮಣ್ಣ ಬೆವಿನಮರದ ನೀಡುವ ದತ್ತಿನಿಧಿ ಪ್ರಶಸ್ತಿಯು ವೇಣು ವಿನೋದ ಮಂಗಳೂರು, ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ನೀಡುವ ದತ್ತಿನಿಧಿ ಪ್ರಶಸ್ತಿಯು ಮೌಲಾನಾ ಸಾಬ್ ಬೀದರ್, ಉದ್ಯಮಿ ಮಹಾಬಲೇಶ್ವರ ಎಡಕ್ಕಾನ ನೀಡುವ ದತ್ತಿನಿಧಿ ಪ್ರಶಸ್ತಿಯು ಸ್ಟೀವನ್ ರೇಗೋ ಮಂಗಳೂರು, ಉದ್ಯಮಿ ಶಿವಶಂಕರ ನೆಕ್ರಾಜೆ ನೀಡುವ ದತ್ತಿನಿಧಿ ಪ್ರಶಸ್ತಿ ಕೆ.ಜಿ.ನಾಗಲಕ್ಷ್ಮೀ ಬಾಯಿ ಬೆಂಗಳೂರು, ನ್ಯಾ. ಮುಹಮ್ಮದ್ ಇಬ್ರಾಹಿಂ ಪಾರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಸತ್ಯವತಿ ಮಂಗಳೂರು, ಜೇಮ್ಸ್ ಮೆಂಡೋನ್ಸಾ ನೀಡುವ ದತ್ತಿನಿಧಿ ಪ್ರಶಸ್ತಿ ಇಕ್ಬಾಲ್ ಕುತ್ತಾರ್, ಅಶ್ರ- ಶಾ ಮಂತೂರು ನೀಡುವ ದತ್ತಿನಿಧಿ ಪ್ರಶಸ್ತಿ ರಾಮ ಅಜೆಕ್ಕಾರ್ ಉಡುಪಿ, ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ನೀಡುವ ದತ್ತಿನಿಧಿ  ಪ್ರಶಸ್ತಿ ಗಣೇಶ್ ಕೆ.ಕಾಸರಗೋಡು, ಭಾಸ್ಕರ ಕೆ. ಕಾಸರಗೋಡು ಹಾಗೂ ಅಜಿತ್ ಸ್ವರ್ಗ ಅವರಿಗೆ ಪ್ರಧಾನಿಸಲಾಗುತ್ತಿದೆ.

Post a Comment

0 Comments