Ticker

6/recent/ticker-posts

ಪಾಕ್ ಪ್ರಜೆಗಳನ್ನು ಓಡಿಸಿ ಎಂದು ಒತ್ತಾಯಿಸಿ ಬಿಜೆಪಿಯಿಂದ ಧರಣಿ, ಕೆ.ಸುರೇಂದ್ರನ್ ಉದ್ಘಾಟನೆ


 ಕಾಸರಗೋಡು: ಕಮ್ಯೂನಿಸ್ಟ್‌ ಮಾರ್ಕಿಸ್ಟ್ ಪಕ್ಷಗಳು ಯಾವಾಗಲೂ ಶತ್ರು ರಾಷ್ಟ್ರಗಳಿಗೆ ಬೆಂಬಲವಾಗುವ ರೀತಿಯ ನಿಲುವು ತಾಳುತ್ತಿದೆಯೆಂದು ಬಿಜೆಪಿ ಮುಖಂಡ ಕೆ.ಸುರೇಂದ್ರನ್ ಹೇಳಿದರು. ಪಾಕ್ ಪ್ರಜೆಗಳನ್ನು ಭಾರತದಿಂದ ಓಡಿಸಿ ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ  ನಡೆದ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಈ ರೀತಿ ಹೇಳಿದರು. 


ಪಾಕಿಸ್ಥಾನಕ್ಕೆ ಬೆಂಬಲ‌ ನೀಡುವ  ಚೀನಾ ದೇಶವು ಕಮ್ಯೂನಿಸ್ಟರ ಅಚ್ಚು‌ಮೆಚ್ಚಿನ ದೇಶವಾಗಿದೆ. ಪಾಕಿಸ್ತಾನದ ಭಯೋತ್ಪಾದಕರನ್ನು ಬೆಂಬಲಿಸುವ ಕೆಲಸವನ್ನು ಕೇರಳ ಸರಕಾರ ಮಾಡುತ್ತಿದೆ. ಎಪ್ರಿಲ್ 29  ರೊಳಗೆ ಕೇರಳದಲ್ಲಿರುವ 150 ರಷ್ಟು ಪಾಕಿಸ್ಥಾನೀಯರಲ್ಲಿ 145 ಮಂದಿಯನ್ನು ಓಡಿಸಬೇಕು ಎಂದು ಕೇಂದ್ರ ಸರಕಾರ ಆದೇಶ ನೀಡಿತ್ತು. ಆದರೆ ರಾಜ್ಯ ಸರಕಾರ ಈ ಬಗ್ಗೆ ಮೌನ ವಹಿಸಿದೆ. ಕೇರಳದಲ್ಲಿ ಇದೀಗ ಪಾಕಿಸ್ಥಾನ ರಸ್ತೆ, ಪಾಕಿಸ್ಥಾನ ಕೇಂದ್ರ, ಪಾಕ್ ಸರ್ಕಲ್ ಎಂಬಿವು ತುಂಬಿಕೊಂಡಿವೆ ಎಂದವರು ಆರೋಪಿಸಿದರು.


 ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಅಧ್ಯಕ್ಷತೆ ವಹಿಸಿದರು. 



ರಾಜ್ಯ ಕಾರ್ಯದರ್ಶಿ ಅಡ್ವ.ಕೆ.ಶ್ರೀಕಾಂತ್,  ವಿ.ರವೀಂದ್ರನ್, ಅಡ್ವ.ವಿ.ಬಾಲಕೃಷ್ಣ ಶೆಟ್ಟಿ, ರವೀಶ ತಂತ್ರಿ ಕುಂಟಾರು, ಸತೀಶ್ಚಂದ್ದ ಭಂಡಾರಿ,  ಪಿ.ಆರ್.ಸುನಿಲ್, ಹಿರಿಯ ಮುಖಂಡ ಕೆ.ಕೆ.ನಾರಾಯಣನ್,  ಇತರರಾದ ಎಂ.ಬಲರಾಜ್, ಮುರಳೀಧರ ಯಾದವ್, ಎಂ.ಜನನಿ, ಮಣಿಕಂಠ ರೈ, ಎಚ್.ಆರ್.ಸುಕನ್ಯ, ಎ.ಕೆ.ಕಯ್ಯಾರ್, ಸವಿತ ಟೀಚರ್, ಪ್ರಮಿಳಾ ಮಜಲ್, ಕೆ.ಎಂ.ಅಶ್ವಿನಿ, ಪುಷ್ಪಾ ಗೋಪಾಲನ್, ಮಹೇಶ್ ಗೋಪಾಲ್, ಸಂಜೀವ ಪುಳಿಕೂರ್, ವೀಣ ಅರುಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮನುಲಾಲ್ ಮೇಲತ್ ಸ್ವಾಗತಿಸಿ ಬಾಬುರಾಜ್ ವಂದಿಸಿದರು

Post a Comment

0 Comments