Ticker

6/recent/ticker-posts

Ad Code

ಭಾರತೀಯ ಸೇನೆಯ ವಿರುದ್ದ ಆಪರೇಶನ್ ಸಿಂಧೂರ್ ವಿರುದ್ದ ಪೋಸ್ಟ್; ಮಲಯಾಳಿ ವಿದ್ಯಾರ್ಥಿ ನಾಗಪುರದಲ್ಲಿ ಸೆರೆ


 ನಾಗಪುರ: ಆಪರೇಶನ್ ಸಿಂಧೂರವನ್ನು ಗೇಲಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಮಲಯಾಳಿ ವಿದ್ಯಾರ್ಥಿಯನ್ನು ನಾಗಪುರ ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿ ಇಡಪ್ಪಳ್ಳಿ ನಿವಾಸಿ ರೆಜಾಸ್ ಸಿದ್ದಿಖ್ (24) ಬಂಧಿತ ಆರೋಪಿ. ಪುಣೆಯಲ್ಲಿ ಕಲಿಯುವ ನಾಗಪುರ ನಿವಾಸಿ ಇಶಾ ಕುಮಾರಿ(22) ಎಂಬಾಕೆಯ ಜತೆ ಲಕದ್ ಗಂಜ್ ವಸತಿಗೃಹದಿಂದ ಈತನನ್ನು ಬಂಧಿಸಲಾಯಿತು. ಕೇಂದ್ರ ಸರಕಾರದ ವಿರುದ್ದ ಯುದ್ದ ಮಾಡಲು ಸಿದ್ದತೆ ಮಾಡುತ್ತಿರುವೆ ಎಂಬ ರೀತಿಯಲ್ಲಿ ರೆಜಾಸ್ ಇಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದನು. ಪಾಕ್ ವಿರುದ್ಧ ಭಾರತ ಸೇನೆ ನಡೆಸಿದ ಆಪರೇಶನ್ ಸಿಂಧೂರ್ ದಾಳಿಯನ್ನು ಈತ ಇದೇ ಪೋಸ್ಟ್ ನಲ್ಲಿ‌ ಖಂಡಿಸಿದ್ದನು. ಅಲ್ಲದೆ ನಕ್ಸಲ್ ನಿಗ್ರಹ ವಿರುದ್ದವೂ ಈತ ಲೇಖನ ಬರೆದಿದ್ದನು.ಈ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 149, 192, 351,353 ಎಂಬೀ ಕಾಯ್ದೆಯಂತೆ ಅಸರೋಪಿಯನ್ನು ಬಂಧಿಸಲಾಯಿತು

Post a Comment

0 Comments