ಕೊಚ್ಚಿನ್: ನಿಷೇಧಿಸಲ್ಪಟ್ಟ ಪೋಪುಲರ್ ಫ್ರಂಟ್ ಭಯೋತ್ಪಾದಕರ ಹಿಟ್ ಲಿಸ್ಟಿನಲ್ಲಿ 950 ಮಂದಿಯ ಹೆಸರು ಇದೆಯೆಂದು ಎನ್.ಐ.ಎ.ನ್ಯಾಯಾಲಯಕ್ಕೆ ತಿಳಿಸಿದೆ. ಕೇರಳದ ಒರ್ವರು ಜಿಲ್ಲಾ ನ್ಯಾಯಾಧೀಶರು, ಆರ್.ಎಸ್.ಎಸ್, ಹಿಂದು ಸಂಘಟನೆಗಳ, ಬಿಜೆಪಿಯ ಹಲವು ಮುಖಂಡರುಗಳ ಹೆಸರು ಈ ಲಿಸ್ಟಿನಲ್ಲಿ ಸೇರಿವೆ. ಸಂಘಟನೆಯ ವಿರುದ್ದ ನಿಲುವು ತಳೆಯುವ ಎಲ್ಲರನ್ನೂ ಹತ್ಯೆಗೈಯ್ಯಲು ಈ ಲಿಸ್ಟ್ ಸಿದ್ದಪಡಿಸಲಾಗಿದೆ ಎಂದು ಎನ್.ಐ.ಎ.ತಿಳಿಸಿದೆ.
ಇದೀಗ ಎನ್.ಐ.ಎ.ಬಂಧಿಸಿದ ಪೋಪುಲರ್ ಫ್ರಂಟ್ ಭಯೋತ್ಪಾದಕರ ಜಾಮೀನು ಅರ್ಜಿ ಕುರಿತು ನ್ಯಾಯಾಲಯದಲ್ಲಿ ವಾದ ಮಂಡಿಸುವ ವೇಳೆ ಎನ್.ಐ.ಎ. ಈ ವರದಿ ನೀಡಿದೆ. ಬಂಧಿತ ತಾಜುದ್ದೀನ್ ಕೈಯಿಂದ 240 ಮಂದಿಯ ಹಿಟ್ ಲಿಸ್ಟ್ ವಶಪಡಿಸಲಾಗಿದೆ. ಅಹಮ್ಮದ್ ಸಾದಿಕ್ ಕೈಯಿಂದ 5 ಮಂದಿಯ, ಇನ್ನೋರ್ವನ ಕೈಯಿಂದ 232 ಮಂದಿಯ, ಆಯೂಬ್ ಕೈಯಿಂದ 500 ಮಂದಿಯ ಲಿಸ್ಟ್ ವಶಪಡಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಗಲ್ಫ್ ದೇಶಗಳಿಂದ ಚಾರಿಟಿ ಎಂಬ ಹೆಸರಿನಲ್ಲಿ ಈಗಲೂ ಸಹ ಪೋಪುಲರ್ ಫ್ರಂಟ್ ಹಣ ಸಂಗ್ರಹಿಸುತ್ತಿದೆ. ಈ ಹಣ ಉಪಯೋಗಿಸಿ ಆಯುಧ ತರಬೇತಿ ನಡೆಸುತ್ತಿವೆ ಎಂದೂ ಎನ್.ಐ.ಎ.ನ್ಯಾಯಾಲಯಕ್ಕೆ ನೀಡಿದ ವರದಿಯಲ್ಲಿ ತಿಳಿಸಿದೆ.
0 Comments