Ticker

6/recent/ticker-posts

ಕೇರಳ ಕೆ.ಎಸ್.ಆರ್.ಟಿ.ಸಿ.ಬಸ್ಸುಗಳ ಮಾಹಿತಿಗಾಗಿ ಚಲೊ ಆ್ಯಾಪ್, ಟಿಕೆಟು ಖರೀದಿಗೂ ಅವಕಾಶ


 ತಿರುವನಂತಪುರಂ: ಕೇರಳ ಕೆ.ಎಸ್‌ಆರ್.ಟಿ.ಸಿ.ಬಸ್ಸುಗಳ ಮಾಹಿತಿಗಳು 'ಚಲೊ' ಆಪ್ ಮೂಲಕ ಲಭಿಸಲಿದೆ. ಚಲೋ ಆಪ್ ಡೌನ್‌ಲೋಡ್ ಮಾಡಿದರೆ ನಾವು ನಿಂತ ಬಸ್ ಸ್ಟಾಪ್, ಮುಂದೆ ಬರುವ ಬಸ್ಸಿನ ಸಮಯ, ಖಾಲಿ ಇರುವ ಸೀಟು ಎಂಬೀ ಮಾಹಿತಿ ಲಭಿಸಲಿದೆ. ಬೇಕಿದ್ದರೆ ಇದೇ ಆಪ್ ಮೂಲಕ ನಾವು ಹೋಗಬೇಕಾದ ಸ್ಥಳಕ್ಕಿರುವ ಟಿಕೆಟ್ ಖರೀದಿಸಬಹುದು. ಅನಂತರ ಬಸ್ ಏರಿದೊಡನೆ ಕಂಡೆಕ್ಟರಿಗೆ ತೋರಿಸಿದರೆ ಸಾಕು. ಈಗಾಗಲೇ ಟಿಕೆಟ್ ತೆಗೆಯಲು ಉಪಯೋಗಿಸುತ್ತಿರುವ ಸ್ಮಾರ್ಟ್ ಕಾರ್ಡುಗಳ ರೀಚಾರ್ಜ್  ಚಲೊ ಆಪ್ ಮೂಲಕ ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಆಪ್ ನಲ್ಲಿ ಜಲವು‌ ಮಹತ್ತರ  ಬದಲಾವಣೆ ಮಾಡಲಾಗುವುದು

Post a Comment

0 Comments