Ticker

6/recent/ticker-posts

ಕುರುಡಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ


 

ಕುರುಡಪದವು: ಹಿರಿಯ ಪ್ರಾಥಮಿಕ ಶಾಲೆ ಕುರುಡಪದವಿನಲ್ಲಿ ವಿಶ್ವ ಯೋಗ ದಿನಾಚರಣೆಯು  ಶಾಲಾ ಸಭಾಂಗಣದಲ್ಲಿ  ಜರಗಿತು.ಈ ಕಾರ್ಯಕ್ರಮವು ಶಾಲಾ ಮುಖ್ಯೋಪಾಧ್ಯಾಯರಾದ ಪದ್ಮನಾಭ ಬರ್ಲಾಯರು ಎಲ್ಲರನ್ನು ಆತ್ಮೀಯವಾಗಿ 

ಸ್ವಾಗತಿಸುವುದರೊಂದಿಗೆ ಆರಂಭಗೊಂಡಿತು.ಶಾಲಾ ಸಿಬ್ಬಂದಿಯಾದ ಚಿದಾನಂದರು ಯೋಗ ಪ್ರಾತ್ಯಕ್ಷಿಕೆಯನ್ನು ಮಾಡು ವುದರೊಂದಿಗೆ, ಯೋಗದ ಮಹತ್ವ ,ಯೋಗ  ಮಾಡುವುದರಿಂದ ನಮ್ಮ ಶರೀರಕ್ಕೆ ಇರುವ ಪ್ರಯೋಜನಗಳನ್ನು, ಸವಿವರವಾಗಿ ತಿಳಿಸಿಕೊಟ್ಟರು. ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕ-ಅಧ್ಯಾಪಿಕೆಯರು ಬಹಳ ಆಸಕ್ತಿಯಿಂದ ಈ ಕಾರ್ಯಕ್ರಮದಲ್ಲಿ ಭಾಗಿಗಳಾದರು.

Post a Comment

0 Comments