Ticker

6/recent/ticker-posts

ಮಹಿಳೆಯ ಮೃತದೇಹ ಮನೆಯ ಬಳಿಯ ಬಾವಿಯಲ್ಲಿ ಪತ್ತೆ


 ಬದಿಯಡ್ಕ: ಮಹಿಳೆಯ ಮೃತದೇಹ ಮನೆಯ ಪರಿಸರದ ಬಾವಿಯಲ್ಲಿ ಪತ್ತೆತಾಗಿದೆ. ಪೈಕ, ಮಣವಾಟ್ಟಿ ಮಖಾಂ ಬಳಿಯ ಹಸೈನಾರ್ ಎಂಬವರ ಪತ್ನಿ ಮೈಮೂನ(43). ಮೃತಪಟ್ಟವರು. ನಿನ್ನೆ (ಮಂಗಳವಾರ)  ಇವರು ನಾಪತ್ತೆಯಾದ ಹಿನ್ನೆಲೆಯಲ್ಲಿ  ಹುಡುಕಾಡಿದಾಗ  ಬಾವಿಯ ಬಳಿ ಪಾತ್ರೆ ಕಂಡುಬಂತು. ಬಾವಿಯಲ್ಲಿ ನೋಡಿದಾಗ ಮೃತದೇಹ ಪತ್ತೆಯಾಗಿದೆ. ಬಾವಿಯಿಂದ ನೀರು ಸೇದುವ ರಾಟೆ ಸರಿಪಡಿಸುವ ವೇಳೆ ಇವರು ಬಿದ್ದು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಮೃತರು ಪತಿ, ಮಕ್ಕಳಾದ ಅಬೂಬಕರ್, ಸಿದ್ದಿಖ್, ಸಾದಿತ್, ಸಾಕಿರ್,ಸಹನ, ಫಾತಿಮ ಎಂಬಿವರನ್ನು ಅಗಲಿದ್ದಾರೆ. ಬದಿ ಪೊಲೀಸರು ಕೇಸು ದಾಖಲಿಸಿದರು

Post a Comment

0 Comments