ಪೆರ್ಮುದೆ : ಧರ್ಮತ್ತಡ್ಕ ಸಮೀಪದ ತಲಮುಗರ್ ಚಲ್ಲಂಗಯ ಎಂಬಲ್ಲಿ ಬಿರುಸಿನ ಮಳೆಗೆ ಗುಡ್ಡ ಕುಸಿದಿದ್ದು ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದಿದ್ದು ಇದೇ ವೇಳೆ ಸಮೀಪದ ಕಟ್ಟಡವೊಂದರ ಮೇಲೆ ಮಣ್ಣು ಬೀಳುವ ದೃಶ್ಯ ವೈರಲ್ ಆಗಿದೆ.
ಇಲ್ಲಿನ ಮುಹಮ್ಮದ್ ಹಾರಿಸ್ ಎಂಬವರು ಅಲ್ಪ ಸಮಯ ಮುಂಚೆ ತನ್ನ ತಾಯಿಯೊಂದಿಗೆ ಆಸ್ಪತ್ರೆಗೆ ತೆರಳಿ ಹಿಂತಿರುಗಿ ಕಾರನ್ನು ನಿಲುಗಡೆಗೊಳಿಸಿ ತೆರಳಿದ್ದರು. ಆದ್ದರಿಂದ ಬೃಹತ್ ಅಪಾಯದಿಂದ ಪಾರಾಗಿದ್ದಾರೆ. ಇದೇ ಸಮೀಪದ ಸ್ಥಳದಲ್ಲಿ ಖಾಲಿ ಕಟ್ಟಡವೊಂದು ಭೂ ಕುಸಿತದ ಕಾರಣ ತನ್ನಷ್ಟಕ್ಕೆ ಸಿಡಿದು ಬಿದ್ದಿದ್ದು ಪ್ರತ್ಯಕ್ಷದರ್ಶಿಗಳು ಇದರ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿರುವುದು ವೈರಲ್ ಆಗುತ್ತಿದೆ. ಇದೇ ಸಂದರ್ಭ ಗುಡ್ಡ ಕುಸಿತದ ಪರಿಣಾಮ ಸಮೀಪದಲ್ಲಿರುವ ಐದು ಮನೆಗಳು ಆತಂಕವನ್ನೆದುರಿಸುತ್ತಿದ್ದು ಮನೆಯರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.
0 Comments