Ticker

6/recent/ticker-posts

ಮನೆಯ ಮುಂಬಾಗಲು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಮೀನಿನ‌ ಪದಾರ್ಥ, ಊಟ ಸೇವಿಸಿ ಚಾ ಕುಡಿದು ಹಿಂತಿರುಗಿದರು.


 ಮನೆಯವರು ಇಲ್ಲದ ವೇಳೆ ಮುಂಬಾಗಿಲು‌ ಮುರಿದು ಒಳ‌ನುಗ್ಗಿದ ಕಳ್ಳರು ಊಟ ಮಾಡಿ, ಚಾ ಕುಡಿದು ಹಿಂತಿರುಗಿದ ಘಟನೆ ನಡೆದಿದೆ. ಕೋಜಿಕ್ಕೋಡ್ ಜಿಲ್ಲೆಯ ತಾಮರಶೇರಿ ಬಳಿಯ ವರ್ಗೀಸ್ ಎಂಬವರ ಮನೆಗೆ ಪ್ರವೇಶಿಸಿದ ಕಳ್ಳರು ಫ್ರಿಡ್ಜ್ ಒಳಗಡೆ ಇದ್ದ ಅನ್ನ, ಮೀನು ಪದಾರ್ಥ, ಉಪ್ಪಿನಕಾಯಿ ಸೇವಿಸಿ ಹಿಂತಿರುಗಿದ್ದಾರೆ. ಅಲ್ಲದೆ ಫ್ರಿಡ್ಜ್ ನಿಂದ ಹಾಲು ತೆಗೆದು ಚಾ ಮಾಡಿ ಕುಡಿದು ಹೋಗಿದ್ದಾರೆ. ಹಾಲ್ ನಲ್ಲಿದ್ದ ಟೇಬಲ್ ಮೇಲೆ  ಚಾ ಕುಡಿದ ಮೂರು ಗ್ಲಾಸುಗಳು ಕಂಡು ಬಂದಿವೆ. ಮೂರು ಕುರ್ಚಿಗಳನ್ನು ತಂದು ಈ ಮೇಜಿನ ಸುತ್ತಲೂ ಇಡಲಾಗಿದೆ. ಮೂರು ಕಳ್ಳರು ಒಳ ನುಗ್ಗಿರಬೇಕು ಎಂದು ವರ್ಗೀಸ್ ಶಂಕೆ ವ್ಯಕ್ತಪಡಿಸಿದ್ದಾರೆ. ವರ್ಗೀಸ್ ಹಾಗೂ ಕುಟುಂಬ ಸದಸ್ಯರು ಸಂಬಂಧಿಕರ ಮನೆಗೆ ಹೋಗಿದ್ದಾಗ ಕಳ್ಳರ ಪ್ರವೇಶ ನಡೆದಿದೆ. ಆದರೆ ಮನೆಯಿಂದ ಇತರ ವಸ್ತುಗಳು ನಾಪತ್ತೆಯಾಗಿಲ್ಲ

Post a Comment

0 Comments