Ticker

6/recent/ticker-posts

ತುಳು ಸಂಘ - ಸಂಸ್ಥೆಗಳ ಡೈರೆಕ್ಟರಿಗೆ ಮಾಹಿತಿ ಆಹ್ವಾನ

ಮಂಗಳೂರು: ತುಳು ಭಾಷೆ, ಕಲೆ, ಸಾಹಿತ್ಯ ಸಂಸ್ಕೃತಿಯ ಸಲುವಾಗಿ ಕಾರ್ಯ ನಿರ್ವಹಿಸುತ್ತಿರುವ ತುಳು ಸಂಘ, ಸಂಸ್ಥೆಗಳ ಮಾಹಿತಿ ಪುಸ್ತಕವನ್ನು ಅಕಾಡೆಮಿ ವತಿಯಿಂದ ಪ್ರಕಟಿಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.ರಾಜ್ಯ, ಹೊರರಾಜ್ಯ, ವಿದೇಶಗಳಲ್ಲಿ ಸಕ್ರಿಯವಾಗಿರುವ ತುಳು ಸಂಘ, ಸಂಸ್ಥೆಗಳು ತಮ್ಮ ಸಂಘ ಆರಂಭವಾದ ವರ್ಷ, ಕೆಲಸ ಕಾರ್ಯದ ವ್ಯಾಪ್ತಿಯ ವಿವರ ಸೇರಿದಂತೆ ಅಗತ್ಯ ಮಾಹಿತಿಯನ್ನು ಎರಡು ಪುಟಗಳಿಗೆ ಮೀರದಂತೆ ಬರೆದು ಜೂ. 15ರೊಳಗೆ ಅಕಾಡೆಮಿಗೆ ಕಳುಹಿಸಬೇಕು, ವಿವರಗಳನ್ನು ರಿಜಿಸ್ಟ್ರಾರ್ / ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಭವನ, ಅಶೋಕ ನಗರ ಪೋಸ್ಟ್ ಉರ್ವಸ್ಟೋರ್, ಮಂಗಳೂರು-06 tulusahityaacademy@ gmail.com ವಿಳಾಸಕ್ಕೆ ಕಳುಹಿಸಬಹುದು ಎಂದು ಪ್ರಕಟನೆ  ತಿಳಿಸಿದೆ.

Post a Comment

0 Comments