ಪಾಲಕ್ಕಾಡ್: ಮಣ್ಣಾರ್ಕಾಡ್ ಹೆಲ್ತ್ ಸೆಂಟರಿನಿಂದ ಲಭಿಸಿದ ಪಾರಸೆಟಮೋಲ್ ಮಾತ್ರೆಯಲ್ಲಿ ಕಬ್ಬಿಣದ ತುಂಡು ಲಭಿಸಿದ್ದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಮೆಡಿಕಲ್ ಆಫೀಸರ್ ಆದೇಶ ನೀಡಿದ್ದಾರೆ.
ಮಣ್ಣಾರ್ಕಾಡ್ ನಿವಾಸಿ ಆಸೀಫ್ ಎಂಬವರ ಮಗನಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾರಸೆಟಮೋಲ್ ಮಾತ್ರೆ ನೀಡಲಾಗಿತ್ತು. ಮಾತ್ರೆಯ ಅರ್ದ ಮಾತ್ರ ತಿಂದರೆ ಸಾಕೆಂದು ಹೇಳಲಾಗಿತ್ತು. ಅದರಂತೆ ಮಾತ್ರೆಯನ್ನು ಎರಡು ತುಂಡು ಮಾಡಿದಾಗ ಒಂದು ತುಂಡಿನಲ್ಲಿ ಕಬ್ಬಿಣ ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ಆರೋಗ್ಯ ಅಧಿಕಾರಿಗಳು ಹೆಲ್ತ್ ಸೆಂಟರಿಗೆ ಆಗಮಿಸಿ ಮಾಹಿತಿ ಪಡೆದರು. ಔಷದ ಕಂಪನಿಯ ವಿರುದ್ದ ಆರೋಗ್ಯ ಸಚಿವಾಲಯಕ್ಕೆ ದೂರು ನೀಡುವುದಾಗಿ ಆಸೀಫ್ ತಿಳಿಸಿದ್ದಾರೆ.
0 Comments