ಕಣ್ಣೂರು: ಮುಸ್ಲಿಂಲೀಗ್ ಕಾರ್ಯಕರ್ತರ ದಾಳಿಯಿಂದ ಗಂಭೀರ ಗಾಯಗೊಂಡು 13 ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ಸಿಪಿಎಂ ಕಾರ್ಯಕರ್ತ ಮೃತಪಟ್ಟಿದ್ದಾರೆ. ಕಣ್ಣೂರು ಅರಯಿಲ್ ವೆಳ್ಳೇರಿ ಮೋಹನನ್ (60) ಮೃತಪಟ್ಟವರು. ಇಂದು (ಶುಕ್ರವಾರ) ಬೆಳಗ್ಗೆ ಕಣ್ಣೂರು ಎಕೆಜಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.
2012 ಫೆಬ್ರುವರಿ 21 ರಂದು ಮೋಹನನ್ ಅವರ ಮೇಲೆ ದಾಳಿ ನಡೆದಿತ್ತು. ಮುಸ್ಲಿಂ ಲೀಗ್ ಕಾರ್ಯಕರ್ತ ಅರಯಿಲ್ ಶುಕೂರ್ ನನ್ನು ಸಿಪಿಎಂ ಕಾರ್ಯಕರ್ತರು ಇರಿದು ಕೊಲೆಗೈದಿದ್ದು ಅದಕ್ಕೆ ಪ್ರತೀಕಾರವಾಗಿ ಮೋಹನನ್ ಮೇಲೆ ದಾಳಿ ನಡೆದಿತ್ತು. ಗಂಭೀರ ಗಾಯಗೊಂಡ ಮೋಹನನ್ 13 ವರ್ಷಗಳ ಹಾಸಿಗೆ ಹಿಡಿದಿದ್ದರು
0 Comments