ತ್ರಿಶೂರ್: ಆರ್.ಎಸ್.ಎಸ್. ಕಾರ್ಯಕರ್ಯನನ್ನು ಕೊಲೆಗೈದು ವಿದೇಶಕ್ಕೆ ಪರಾರಿಯಾಗಿದ್ದ ಭಯೋತ್ಪಾದಕ ಸಂಘಟನೆಯ ನೇತಾರನನ್ನು 31 ವರ್ಷಗಳ ನಂತರ ಸೆರೆ ಹಿಡಿಯಲಾಗಿದೆ. ಜಂಇಯ್ಯತುಲ್ ಇಹಸಾನಿಯ ಎಂಬ ಭಯೋತ್ಪಾದಕ ಸಂಘಟನೆಯ ಮುಖಂಡ ವಾಡಾನಪಳ್ಳಿ ನಿವಾಸಿ ಶಾಜುದ್ದೀನ್ (ಶಾಜು 51) ಎಂಬಾತನನ್ನು ನೆಡುಂಬಾಶೇರಿ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ. ಸಕ್ರಿಯ ಆರ್.ಎಸ್.ಎಸ್.ಕಾರ್ಯಕರ್ತ ತ್ರಿಶೂರಿನ ಸುನಿಲ್ ಎಂಬವರನ್ನು ಮನೆಗೆ ಅತಿಕ್ರಮಿಸಿ ಇರಿದು ಕೊಲೆಗೈದು ಮನೆಯವರನ್ನು ಗಾಯಗೊಳಿಸಿದ ಪ್ರಕರಣದಲ್ಲಿ ಈತ ಮುಖ್ಯ ಆರೋಪಿಯಾಗಿದ್ದಾನೆ.
1994 ನವಂಬರ್ 4 ರಂದು ಸುನಿಲ್ ನ ಕೊಲೆ ನಡೆದಿತ್ತು. ಆರಂಭದಲ್ಲಿ ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು 9 ಮಂದಿ ಸಿಪಿಎಂ ಕಾರ್ಯಕರ್ತರನ್ನು ಬಂಧಿಸಿದ್ದು ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಈ ಪ್ರಕರಣವನ್ನು ರದ್ದು ಪಡಿಸಿದ ಹೈಕೋರ್ಟ್, ತನಿಖೆಯನ್ನು ಕ್ರೈಂಬ್ರಾಂಚಿಗೆ ವಹಿಸಿತ್ತು. ಕ್ರೈಂಬ್ರಾಂಚ್ ನಡೆಸಿದ ತನಿಖೆಯಲ್ಲಿ ಜಂಇಯ್ಯತುಲ್ ಇಹ್ಸಾನಿಯ ಎಂಬ ಭಯೋತ್ಪಾದಕ ಸಂಘ ಈ ಕೊಲೆಯ ಹಿಂದೆ ಇದೆಯೆಂದು ಕಂಡುಕೊಂಡಿತು. 9 ಮಂದಿ ಆರೋಪಿಗಳನ್ನು ಸಹ ಪತ್ತೆ ಹಚ್ಚಲಾಗಿದ್ದು 6 ಮಂದಿಯನ್ನು ಬಂಧಿಸಲಾಯಿತು. ಈ ಮಧ್ಯೆ ಶಾಜುದ್ದೀನ್ ವಿದೇಶಕ್ಕೆ ಪರಾರಿಯಾಗಿದ್ದು ಆತನನ್ನು ಇದೀಗ ಬಂಧಿಸಲಾಗಿದೆ
0 Comments