Ticker

6/recent/ticker-posts

ಅತಿ ತೀವ್ರ ಮಳೆ; ಜಿಲ್ಲೆಯ ಶಿಕ್ಷಣ ಕೇಂದ್ರಗಳಿಗೆ ನಾಳೆ ರಜೆ


 ಕಾಸರಗೋಡು:  ಅತಿ ತೀವ್ರ ಮಳೆಯ ಹಿನ್ನೆಲೆಯಲ್ಲಿ ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಕಾಸರಗೋಡು ಜಿಲ್ಲೆಯಲ್ಲಿ ನಾಳೆ (ಬುದವಾರ) ಶಾಲೆಗಳಿಗೆ ರಜೆ ಸಾರಲಾಗಿದೆ.

ಜಿಲ್ಲೆಯ ಶಾಲೆಗಳು, ಕಾಲೇಜುಗಳು, ವೃತ್ತಿಪರ ಕಾಲೇಜುಗಳು, ಕೇಂದ್ರೀಯ ವಿದ್ಯಾಲಯಗಳು, ಬೋಧನಾ ಕೇಂದ್ರಗಳು, ಮದರಸಾಗಳು, ಅಂಗನವಾಡಿಗಳು ಮತ್ತು ವಿಶೇಷ ತರಗತಿಗಳಿಗೆ ರಜೆ ಅನ್ವಯಿಸುತ್ತದೆ. ಈ ಹಿಂದೆ ಘೋಷಿಸಲಾದ ಎಲ್ಲಾ ಪರೀಕ್ಷೆಗಳು (ವೃತ್ತಿಪರ, ವಿಶ್ವವಿದ್ಯಾಲಯ ಮತ್ತು ಇತರ ಇಲಾಖಾ ಪರೀಕ್ಷೆಗಳು ಸೇರಿದಂತೆ) ನಿಗದಿಯಂತೆ ನಡೆಯಲಿವೆ. ಪರೀಕ್ಷಾ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

Post a Comment

0 Comments