ಭಾರತೀಯ ಮಜ್ದೂರ್ ಸಂಘ ಕುಂಬ್ದಾಜೆ ಪಂಚಾಯತ್ ಸಮಿತಿಯ ಕುಟುಂಬ ಸಂಗಮ ಕಾರ್ಯಕ್ರಮವು ಪೊಡಿಪ್ಪಳ್ಳ ಶ್ರೀ ಶಾರದಾಂಬಾ ಬಾಲಗೋಕುಲ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಸಹಕಾರ್ಯದರ್ಶಿ ಶ್ರೀ ದಿನೇಶನ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಬಿ ಎಂ ಎಸ್ ಪಂಚಾಯತ್ ಸಮಿತಿ ಅಧ್ಯಕ್ಷರಾದ ಶ್ರೀ ನಾರಾಯಣ ಪದ್ಮಾರ್ , ವಲಯ ಕಾರ್ಯದರ್ಶಿ ಶ್ರೀ ಸದಾಶಿವ ಪಣಿಯೆ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುಂಬ್ದಾಜೆ ಮಂಡಲ ಕಾರ್ಯವಾಹ್ ಶ್ರೀ ಕೃಷ್ಣ ಪ್ರಸಾದ್,ವಲಯ ಸದಸ್ಯರಾದ ಶ್ರೀ ರಾಮಕೃಷ್ಣ ಪೊಡಿಪ್ಪಳ್ಳ, ಖಜಾಂಜಿ ಶ್ರೀ ವಿಜಯ್ ಕುಮಾರ್ ಕುರುಮುಜ್ಜಿ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಿ ಎಂ ಎಸ್ ನ ಹಿರಿಯ ಸದಸ್ಯರಾದ ಶ್ರೀ ಕೃಷ್ಣ ರೈ ಬೆಳಿಂಜ ಇವರನ್ನು ಗೌರವಿಸಲಾಯಿತು.
ಭಾರತೀಯ ಮಜ್ದೂರ್ ಸಂಘ ಕುಂಬಡಾಜೆ ಪಂಚಾಯತ್ ಸಮಿತಿಯ ಕಾರ್ಯದರ್ಶಿ ಶ್ರೀ ಪ್ರಕಾಶ್ ಪಾವೂರು ಸ್ವಾಗತಿಸಿ , ಶ್ರೀ ದಾಮೋದರ ಮಾರ್ಪನಡ್ಕ ವಂದಿಸಿದರು.
0 Comments