Ticker

6/recent/ticker-posts

ಕಟ್ಟಡದ ಮೂರನೇ ಮಹಡಿಯಿಂದ ಗುತ್ತಿಗೆದಾರ ದೂಡಿ ಹಾಕಿ ಗಂಭೀರ ಗಾಯಗೊಂಡಿದ್ದ ವ್ಯಾಪಾರಿ ಮೃತ್ಯು


 ಕಾಞಂಗಾಡ್:  ಕಟ್ಟಡದ ಮೂರನೇ ಮಹಡಿಯಿಂದ ಗುತ್ತಿಗೆದಾರ ದೂಡಿ ಹಾಕಿ ಗಂಭೀರ ಗಾಯಗೊಂಡಿದ್ದ ವ್ಯಾಪಾರಿ ಮೃತಪಟ್ಟಿದ್ದಾರೆ. ಕಾಞಂಗಾಡ್ ವೆಳ್ಳಿಕೋತ್ ಪರಳತ್ ನಿವಾಸಿ ರೋಯ್ ಜೋಸೆಫ್ ಎಯುಪ್ಲಾಕನ್ (45) ಮೃತಪಟ್ಟ ವ್ಯಾಪಾರಿ. ಇಂದು (ಗುರುವಾರ) ಬೆಳಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.

  ಅಗಸ್ಟ್ 3 ರಂದು ಮಧ್ಯಾಹ್ನ 1.30 ರ  ವೇಳೆ ಮಾವುಂಗಾಲ್ ಮೂಲಕಂಡ ಎಂಬಲ್ಲಿ ರೋಯ್ ನಿರ್ಮಿಸುವ ಕಟ್ಟಡದ 3 ನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದರು. ಈ ಕಟ್ಟಡದ ಗುತ್ತಿಗೆದಾರ  ಪುಲ್ಲೂರು ನಿವಾಸಿ ಸುರೇಂದ್ರನ್ ಅವರಯ ರೋಯ್ ಯನ್ನು ಕೆಳಕ್ಕೆ ದೂಡಿದ್ದರು. ಗಂಭೀರ ಗಾಯಗೊಂಡ ರೋಯ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ ಗುತ್ತಿಗೆದಾರ ಸುರೇಂದ್ರನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ

Post a Comment

0 Comments