Ticker

6/recent/ticker-posts

ಯುವಕನ ಮೃತದೇಹ ಮನೆಯಂಗಳ ಬಳಿಯ ಬಾವಿಯಲ್ಲಿ ಪತ್ತೆ


 ಯುವಕನ ಮೃತದೇಹ ಮನೆಯಂಗಳ ಬಳಿಯ ಬಾವಿಯಲ್ಲಿ ಪತ್ತೆಯಾಗಿದೆ. ಕುಂಡಂಗುಯಿ ವ್ಯಾಪಾರಿ ಭವನ ಬಳಿಯ ನಿವಾಸಿ ಮಜೀದ್(37) ಮೃತಪಟ್ಟ ಯುವಕ. ನಿನ್ನೆ (ಮಂಗಳವಾರ) ರಾತ್ರಿ 12 ಗಂಟೆಯ ವೇಳೆ ಈ ಘಟನೆ ನಡೆದಿದೆ.  ದೊಡ್ಡ ಶಬ್ದ ಕೇಳಿದಾಗ ಮನೆಯವರು ನೆರೆಮನೆಯವರಿಗೆ ತಿಳಿಸಿದ್ದರು. ನೆರೆಮನೆಯವರು ಆಗಮಿಸಿ ಮಜೀದ್ ನನ್ನು ಮೇಲಕೆತ್ತಿ ಆಸ್ಪತ್ರೆಗೆ ಸಾಗಿಸುವ ಮದ್ಯೆ ಅವರು ಕೊನೆಯುಸಿರೆಳೆದರು. ಬೇಡಗಂ ಪೊಲೀಸರು ಕೇಸು ದಾಖಲಿಸಿದರು. ಮೃತರು ತಂದೆ ಇಬ್ರಾಹಿಂ, ತಾಯಿ ಸೈನಬಿ, ಸಹೋದರ ಸಹೋದರಿಯರಾದ ಮುಸ್ತಫ, ಸಿದ್ದಿಖ್, ಆದಂ, ಸುಹರ, ಮಿಸ್ರಿಯ, ಆಯಿಷ ಎಂಬಿವರನ್ನು ಅಗಲಿದ್ದಾರೆ

Post a Comment

0 Comments