ಮಧೂರು :ಬಂಟರ ಸಂಘದ ವತಿಯಿಂದ ಆಟಿದ ಕೂಟ ಸಡಗರ ಸಂಭ್ರಮದಿಂದ ನಡೆಯಿತು. ಮಧೂರು ಪರಕ್ಕಲ ದಲ್ಲಿರುವ ಸಂಘದ ಭವನದಲ್ಲಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧೂರು ಘಟಕದ ಅಧ್ಯಕ್ಷ ರಾಮಕೃಷ್ಣ ಆಳ್ವ ಕುತ್ತಾರ್ ಗುತ್ತು ವಹಿಸಿದರು. ಸಂಘದ ಮಹಿಳಾ ಘಟಕದ ವಿಶೇಷ ಮುತುವರ್ಜಿ ಯಿಂದ ನಡೆಸಲಾದ ಆಟಿದ ಕೂಟ ಕಾರ್ಯ ಕ್ರಮಕ್ಕೆ ಗೌರವಧ್ಯಕ್ಷೆ ಪ್ರಸದ್ದ ನಾಟಿ ವೈದ್ಯೆ ಡಾ! ಯಮುನಾ ಎಸ್ ಶೆಟ್ಟಿ, ಅಧ್ಯಕ್ಷೆ ಶ್ಯಾಮಲಾ ಎಂ ಶೆಟ್ಟಿ, ದೀಪ ಪ್ರಜ್ವಲನೆ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಸರಗೋಡಿನ ಹಿರಿಯ ನ್ಯಾಯವಾದಿ ಸದಾನಂದ ರೈ ಹಾಗೂ ಅವರ ಧರ್ಮ ಪತ್ನಿ ಶರಣ್ಯ ಎಸ್ ರೈ ಕಾರ್ಯ ಕ್ರಮದ ಉದ್ಘಾಟನೆ ಯನ್ನು ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸದಾನಂದ ರೈ ಬಂಟರು ಒಗ್ಗಟ್ಟಾಗಿ. ಸಮಸ್ಯೆ ಗಳಿಗೆ ಹೋರಾಡಬೇಕಾದ ಸಮಯ ಸನ್ನಿಹಿತವಾಗಿದೆ ಎಂದರು.
ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು ಪ್ರಸ್ತಾವಿಕ ನುಡಿಯುತ್ತ ಸಮಾಜದ ಕೊಡುಗೈ ದಾನಿಗಳಾದ ಡಾ. ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಮತ್ತು ಕೆ. ಕೆ. ಶೆಟ್ಟಿ ಕುತ್ತಿಕ್ಕಾರು ಅವರ ಮುಂದಾಳುತ್ವದಲ್ಲಿ ಕುಂಬಳೆಯ ನಾಯ್ಕಾಪುನಲ್ಲಿ ನಿರ್ಮಿಸಲುದ್ದೆಶಿಸಿದ ಕಾಸರಗೋಡು ಜಿಲ್ಲಾ ಬಂಟರ ಭವನದ ರೂಪು ರೇಷೆಗಳನ್ನು ತಯಾರಿಸಲಾಗಿದ್ದು ಅದಕ್ಕೆ ಜಿಲ್ಲೆಯ ಬಂಟ ಸಮಾಜದ ಸರ್ವರ ತನು ಮನ ಧನಗಳ ಸಹಾಯ ಸಹಕಾರ ಅಗವಿದೆ.ಈ ಬಂಟರ ಭವನ ಕಾಸರಗೋಡಿನ ಬಂಟರ ಅಭಿಮಾನದ ಪ್ರತೀಕವಾಗಲಿದೆ ಎಂದರು.ಪ್ರತಿಯೊಂದು ಬಂಟರ ಮನೆಯಿಂದಲೂ ಇದಕ್ಕೆ ತಮ್ಮ ದೇಣಿಗೆಯನ್ನು ಸಂಗ್ರಹಣೆ ಮಾಡಬೇಕಾಗಿದೆ ಎಂದರು. ಮಹಿಳಾ ಘಟಕದ ಕಾರ್ಯದರ್ಶಿ ಜಯಲಕ್ಷ್ಮಿ ಅಡಪ ಅವರು ಪ್ರಾರ್ಥನೆಯೊಂದಿಗೆ ಆರಂಭ ಗೊಂಡ ಕಾರ್ಯಕ್ರಮದಲ್ಲಿ ಹರಿದಾಸ ನ್ಯಾಯವಾದಿ ಮಹಾಬಲ ಶೆಟ್ಟಿ ಅವರಿಂದ ಅಕ್ಷಯ ಪಾತ್ರೆ ಎಂಬ ಹರಿಕಥಾ ಪ್ರಸಂಗ ನಡೆಯಿತು. ಬಳಿಕ ಸಂಘದ ಮಹಿಳೆಯರು ಮನೆಗಳಲ್ಲಿ ಮಾಡಿ ತಂದ ವೈವಿಧ್ಯಮಯ ತಿಂಡಿ ತಿನಸುಗಳನ್ನು ಸಮಾರಂಭದಲ್ಲಿ ಬಂದು ಸೇರಿದ ಬಂಟ ಭಾಂಧವರು ತಿಂದು ಸವಿದರು. ಈ ಸಂಧರ್ಭದಲ್ಲಿ ಹಿರಿಯ ವ್ಯಕ್ತಿ ಗಳಾದ ಕಾಸರಗೋಡು ಟೌನ್ ಬ್ಯಾಂಕಿನ ನಿವ್ರತ್ತ ಮಹಾ ಪ್ರಬಂಧಕ ಮಹಾಬಲ ರೈ, ಉದ್ಯಮಿಗಳಾದ ದೂಮಣ್ಣ ರೈ
ರಮೇಶ್ ಶೆಟ್ಟಿ , ಶ್ರೀಮತಿ ಚಿನ್ನಕ್ಕೆ ಅವರುಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು ನಿವೃತ್ತ ಮುಖ್ಯ ಶಿಕ್ಷಕ ರಾಮ ಮಾಸ್ಟರ್ ಸಿರಿಬಾಗಿಲು, ನಿವೃತ್ತ ಬ್ಯಾಂಕ್ ಅಧಿಕಾರಿ ಮಹಾಬಲ ಶೆಟ್ಟಿ ಕುದ್ರೆಪ್ಪಾಡಿ ಸಹಿತ ಗಣ್ಯರನೇಕರು ಸಮಾರಂಭದಲ್ಲಿ ಭಾಗವಹಿಸಿದರು.
ಮಹಿಳೆಯರಿಗಾಗಿ ಹಗ್ಗ ಜಗ್ಗಾಟ, ಲಿಂಬೆ ಚಮಚ, ಸಂಗೀತ ಕುರ್ಚಿ ಸ್ಪರ್ಧೆಗಳು ನಡೆಯಿತು ಶ್ರೀ ಎಂ.ಅಶೋಕ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಉದ್ಯಮಿ ರಮೇಶ್ ಶೆಟ್ಟಿ ಕೊನೆಗೆ ವಂದಿಸಿದರು
0 Comments