Ticker

6/recent/ticker-posts

ವರ್ಕಾಡಿ ಪಂಚಾಯತು ಆಡಳಿತದ ಭ್ರಷ್ಟಾಚಾರದ ವಿರುದ್ದ ಬಿಜೆಪಿ ಪ್ರತಿಭಟನೆ; ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್ ಉದ್ಘಾಟನೆ


 ವರ್ಕಾಡಿ: ಸಿಪಿಎಂ ಆಡಳಿತದಲ್ಲಿರುವ ಸ್ಥಳೀಯಾಡಳಿತೆಗಳು ಭ್ರಷ್ಟಾಚಾರದ ಪರ್ಯಾಯವಾಗಿ  ಮಾರ್ಪಟ್ಟಿದೆಯೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್.ಪಿ.ಆರ್.ಹೇಳಿದರು. ವರ್ಕಾಡಿ ಗ್ರಾಮ ಪಂಚಾಯತಿನ ಭ್ರಷ್ಟಾಚಾರ ವಿರುದ್ದ ಬಿಜೆಪಿ ಪಂಚಾಯತು ಸಮಿತಿ ನಡೆಸಿದ ಮುತ್ತಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಈ ರೀತಿ ಹೇಳಿದರು. ಪಿಣರಾಯಿ ವಿಜಯನ್ ಸರಕಾರ ನಡೆಸುತ್ತಿರುವ ಸ್ವಜನಪಕ್ಷಪಾದ ತಳ ಮಟ್ಟದಲ್ಲೂ  ನಡೆದಿದೆ. ಕುಟುಂಬ ಶ್ರೀ ಗಳನ್ನು ಎಡರಂಗ ಸರಕಾರವು ರಾಜಕೀಯ ಲಾಭಕ್ಕಾಗಿ ಬಳಸುತ್ತಿವೆ ಎಂದವರು ಹೇಳಿದರು. ಮಹಿಳಾ ಮೋರ್ಚಾ ನೇತಾರೆ ಕೆ.ಎಸ್.ರಮಣಿ ಮುಖ್ಯ ಭಾಷಣ ಮಾಡಿದರು. ಬಿಜೆಪಿ ವರ್ಕಾಡಿ ಪಂಚಾಯತು ಸಮಿತಿ ಅಧ್ಯಕ್ಷ ಭಾಸ್ಕರ ಪೊಯ್ಯ ಅಧ್ಯಕ್ಷತೆ ವಹಿಸಿದರು. ಪಕ್ಷದ ಮುಂದಾಳುಗಳಾದ ಮುರಳೀಧರ ಯಾದವ್, ಮಣಿಕಂಠ ರೈ, ಆದರ್ಶ್ ಬಿ.ಎಂ, ಕೆ.ವಿ.ಭಟ್, ಯತಿರಾಜ್, ಧೂಮಪ್ಪ ಶೆಟ್ಟಿ, ತಾಮರಾಕ್ಷನ್, ಜನಪ್ರತಿನಿಧಿಗಳು ಭಾಗವಹಿಸಿದರು. ಮಜಿರ್ಪಳ್ಳದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ಪಂಚಾಯತು ಕಚೇರಿ ಬಳಿ ಪೊಲೀಸರು ತಡೆದರು.

Post a Comment

0 Comments