Ticker

6/recent/ticker-posts

ಅಡುಗೆ ಮನೆಗೆ ನುಗ್ಗಿ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಲೆ ಎಗರಿಸಲು ಯತ್ನ; ಬೊಬ್ಬೆ ಹಾಕಿದಾಗ ತುಂಡಾದ ಮಾಲೆಯನ್ನು ಬಿಟ್ಟು ಪರಾರಿಯಾದ ಕಳ್ಳ


 ಅಡುಗೆ ಮನೆಯಲ್ಲಿ ಕೆಲಸದಲ್ಲಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಲೆಯನ್ನು ಎಗರಿಸಲು ವಿಫಲ ಯತ್ನ ನಡೆದಿದೆ.‌ಯುವತಿ ಬೊಬ್ಬಿಟ್ಟ ವೇಳೆ ಕಳ್ಳ ಓಡಿ ಪರಾರಿಯಾಗಿದ್ದಾನೆ. ವೆಳ್ಳರಿಕುಂಡು ಪೊಲೀಸ್ ಠಾಣಾ ವ್ಯಾಪ್ತಿಯ ಕ್ಲಾಯಿಕ್ಜೋಡು ಎಂಬಲ್ಲಿ ನಿನ್ನೆ (ಗುರುವಾರ) ರಾತ್ರಿ ಈ ಘಟನೆ ನಡೆದಿದೆ. ಇಲ್ಲಿನ ಅಬ್ದುಲ್ಲರ ಪುತ್ರಿಯ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಲು ಯತ್ನ ನಡೆದಿದೆ. ಇವರ ಪತಿ ಹಾಗೂ ಮಕ್ಕಳು ಸಮೀಪದ ಕೋಣೆಯಲ್ಲಿದ್ದರು. ಈ ವೇಳೆ ಮನೆಯೊಳಗೆ‌ ನುಗ್ಗಿದ  ಕಳ್ಳ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಲು ಯತ್ನಿಸಿದ್ದನು. ಮಹಿಳೆ ಬೊಬ್ಬಿಟ್ಟಾಗ ಕಳ್ಳ ತುಂಡು ಮಾಡಿದ್ದ ಚಿನ್ನದ ಸರವನ್ನು ಕೆಳಕ್ಕೆಸೆದು ಪರಾರಿಯಾಗಿದ್ದಾನೆ. ವೆಳ್ಳರಿಕುಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ

Post a Comment

0 Comments